ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಆಸ್ಪತ್ರೆ ಜನರೇಟರ್ ಬ್ಯಾಟರಿ ಕಳ್ಳತನ; ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯಿತು ಚಿತ್ರಣ

ಪುತ್ತೂರಿನ ಹಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಜನರೇಟರ್ ಬ್ಯಾಟರಿ ಕಳವು ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಆಸ್ಪತ್ರೆಯಿಂದ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಹಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಜನರೇಟರ್ ಗೆ ಅಳವಡಿಸಿದ್ದ ಬ್ಯಾಟರಿಯನ್ನು ಅಪರಿಚಿತ ವ್ಯಕ್ತಿಯೋರ್ವ ಆಟೋರಿಕ್ಷಾದಲ್ಲಿ ಬಂದು ಕದ್ದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಸ್ಪತ್ರೆಯಲ್ಲಿ ಕರೆಂಟ್ ಹೋದ ಸಂದರ್ಭ ಜನರೇಟರ್ ಸ್ಟಾರ್ಟ್ ಆಗದ ಕಾರಣ, ಪರಿಶೀಲನೆ ನಡೆಸಿದಾಗ ಬ್ಯಾಟರಿ ಕಳವಾದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

16/06/2022 03:06 pm

Cinque Terre

10.6 K

Cinque Terre

0

ಸಂಬಂಧಿತ ಸುದ್ದಿ