ಮೈಸೂರು: ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲಿ ನಾಲ್ಕು ಜನರನ್ನು ಬಲಿ ಪಡೆದಿದ್ದ ಹುಲಿಯನ್ನು ಮೈಸೂರಿಗೆ ಕರೆತರಲಾಗಿದೆ. ಇಲ್ಲಿನ ಕೂರ್ಗಳ್ಳಿಯಲ್ಲಿರುವ ಚಿಕಿತ್ಸಾ ಕೇಂದ್ರದಲ್ಲಿ ಈ ನರಭಕ್ಷಕ ಹುಲಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಧುಮಲೈ ಹಾಗೂ ಪಂದನೂರು ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ನಾಲ್ಕು ಮಂದಿಯನ್ನು ತಿಂದು ಹಾಕಿದ್ದ ವ್ಯಾಘ್ರ, 30ಕ್ಕೂ ಹೆಚ್ಚು ಜಾನುವಾರುಗಳನ್ನೂ ಕೊಂದು ಹಾಕಿತ್ತು!
ಸತತ 21 ದಿನಗಳ ವರೆಗಿನ ಕಾರ್ಯಾಚರಣೆಯ ನಂತರ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ನರಭಕ್ಷಕ ಹುಲಿಯಿಂದಾಗಿ ಮಧುಮಲೈ ಸುತ್ತಮುತ್ತಲಿನ ಪ್ರದೇಶದ ಜನರು ಭಯಭೀತಿಯಿಂದಲೇ ದಿನದೂಡುತ್ತಿದ್ದರು. ಹುಲಿಯನ್ನು ಸೆರೆ ಹಿಡಿದ ಬಳಿಕ ಇಲ್ಲಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
Kshetra Samachara
17/10/2021 10:36 am