ಮಂಗಳೂರು: ಮಾದಕ ವಸ್ತುಗಳ ಜಾಲದ ಮೇಲೆ ಭರ್ಜರಿ ಬೇಟೆ ನಡೆಸಿರುವ ನಗರದ ಸಿಸಿಬಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ನೈಜೀರಿಯಾದ ಪ್ರಜೆ ಫ್ರಾಂಕ್‌ನನ್ನು ಈಗಾಗಲೇ ಬಂಧಿಸಿದ್ದು, ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಆರೋಪಿ ಫ್ರಾಂಕ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸ್ಥಳಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದು, ಅವನೊಂದಿಗೆ ಸಂಪರ್ಕದಲ್ಲಿದ್ದ ಇತರರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೊತೆಗೆ ಆರೋಪಿಗು ಬೇರೆ ಕಡೆಗಳಲ್ಲಿ ಸಂಗ್ರಹಿಸಿಟ್ಟಿರುವ ಮಾದಕ ವಸ್ತುಗಳನ್ನು ಪತ್ತೆಹಚ್ಚುವ ಕಾರ್ಯಕ್ಕೂ ಮುಂದಾಗಿದ್ದಾರೆ.
ಫ್ರಾಂಕ್ ಮಾದಕ ವಸ್ತುಗಳನ್ನು ತೊಕ್ಕೊಟ್ಟು ನಿವಾಸಿ ಶಾನ್‌ಗೆ ನೀಡುತ್ತಿದ್ದ. ಬಳಿಕ ಅದನ್ನು ಕಿಶೋರ್ ಅಮನ್ ಶೆಟ್ಟಿ, ನೌಶಿಲ್ ಹಾಗೂ ಇತರರು ಖರೀದಿಸಿ ಬೆಂಗಳೂರಿಗೆ ತರುತ್ತಿದ್ದರು. ಈ ಮೂವರು ಡ್ರಗ್ ಪೆಡ್ಲರ್‌ಗಳಿಗೆ ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳು ಹಾಗೂ ಸಿನಿಮಾ ರಂಗದ ಕೆಲವು ವ್ಯಕ್ತಿಗಳೊಂದಿಗೆ ನಂಟಿದೆ ಎನ್ನಲಾಗಿದೆ.
Kshetra Samachara
01/10/2020 05:02 pm