ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶಾಲಾ ವಿದ್ಯಾರ್ಥಿನಿಗೆ ಬಸ್ ಚಾಲಕನಿಂದ ಲೈಂಗಿಕ ಕಿರುಕುಳ; ಆರೋಪ ಸಾಬೀತು- ಅಪರಾಧಿಗೆ ಜೈಲು

ಮಂಗಳೂರು: ಕಿನ್ನಿಗೋಳಿ ಸಮೀಪದ ಹೊಸ ಕಾವೇರಿಯ ನಿವಾಸಿ ಶಾಲಾ ಬಸ್‌ನ ಚಾಲಕ ವಿಜಯ್ ಯಾನೇ ಉಮೇಶ ಎಂಬಾತ 5ನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಮುಲ್ಕಿ ಪೊಲೀಸರು ಬಂಧಿಸಿದ್ದು, ಆರೋಪಿಗೆ ಮಂಗಳೂರಿನ ದ.ಕ.ಜಿಲ್ಲಾ ಫಾಸ್ಟ್ ಟ್ರಾಕ್ ನ್ಯಾಯಾಲಯವು 5 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳು ಸೆರೆಮನೆ ಹಾಗೂ ಮತ್ತೊಂದು ಕಾಯ್ದೆಯಡಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1,000 ರೂ. ದಂಡ, ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ನೀಡಿದೆ.

ಕಿನ್ನಿಗೋಳಿ ಸಮೀಪದ ಹೊಸ ಕಾವೇರಿಯ ವಿಜಯ್ ಯಾನೆ ಉಮೇಶ ಎಂಬಾತ ಶಾಲಾ ಬಸ್‌ನ ಚಾಲಕನಾಗಿದ್ದು 2019 ಸೆ. 16ರಂದು ಕಿನ್ನಿಗೋಳಿ ಖಾಸಗಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ವಿಕಲಚೇತನ ಬಾಲಕಿಯನ್ನು ಕಿನ್ನಿಗೋಳಿಯಲ್ಲಿ ಬಸ್‌ನಿಂದ ಇಳಿಸದೇ ಎಲ್ಲ ಮಕ್ಕಳನ್ನು ಇಳಿಸಿದ ಅನಂತರ ಶಿಬರೂರು ರಸ್ತೆಯ ಬಳಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ದೂರು ಮುಲ್ಕಿ ಠಾಣೆಯಲ್ಲಿ ದಾಖಲಾಗಿತ್ತು.

ಅಂದಿನ ಮುಲ್ಕಿ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸ್ತುತ ಬಹ್ಮಾವರ ಠಾಣೆಯ ಇನ್‌ಸ್ಪೆಕ್ಟರ್ ಅನಂತಪದ್ಮನಾಭ ಅವರು ದೂರು ದಾಖಲಿಸಿಕೊಂಡು ಸಂಪೂರ್ಣ ತನಿಖೆಯನ್ನು ನಡೆಸಿ ಜಿಲ್ಲಾ ಫಾಸ್ಟ್ಟ್ರಾಕ್ ನ್ಯಾಯಾಲಯದಲ್ಲಿ ಅಪರಾಧಿಗೆ ಶಿಕ್ಷೆಗೆ ಕೇಸ್‌ ದಾಖಲಿಸಿಕೊಂಡಿದ್ದರು.

Edited By : Vijay Kumar
Kshetra Samachara

Kshetra Samachara

07/09/2022 08:38 pm

Cinque Terre

7.04 K

Cinque Terre

0

ಸಂಬಂಧಿತ ಸುದ್ದಿ