ಉಡುಪಿ: ತನ್ನನ್ನು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ ಮದುವೆಯಾಗುವುದಾಗಿ ನಂಬಿಸಿ ಈಗ ಮೋಸ ಮಾಡಿದ್ದಾಗಿ ಯುವತಿಯೊಬ್ಬಳು ಉಡುಪಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹರ್ಷ ಮೊಗವೀರ ಎಂಬಾತ ಬಸ್ ಚಾಲಕನಾಗಿ ಕೆಲಸ. ಮಾಡುತ್ತಿದ್ದಾನೆ. ತನ್ನನ್ನು ಆರೇಳು ವರ್ಷಗಳಿಂದ ಪ್ರೀತಿಸುತ್ತಿದ್ದ.ಕ್ರಮೇಣ ತಂಗಿಯ ಮದುವೆ ಇದೆ. ಈಗ ಮದುವೆ ಸಾಧ್ಯವಿಲ್ಲ ಎನ್ನುತ್ತಿದ್ದ. ಈಗ ತಂಗಿಯ ಮದುವೆ ಆಗಿದ್ದರೂ ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿರುವುದಾಗಿ ಕುಂದಾಪುರದ ಕಾಳಾವರ ನಿವಾಸಿ ಶಾಂತಿ ಎಂಬಾಕೆ ದೂರಿದ್ದಾರೆ. ನನಗೆ ನ್ಯಾಯ ಬೇಕು. ನನಗೆ ಮೋಸ ಆದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆದರೂ ಪ್ರೀತಿಸುತ್ತಿದ್ದಾತ ಮದುವೆಗೆ ಒಪ್ಪುತ್ತಿಲ್ಲ. ನನಗೆ ನ್ಯಾಯ ಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
PublicNext
06/09/2022 05:19 pm