ಮಣಿಪಾಲ: ಯುವಕನೊಬ್ಬ ಕಂಠಪೂರ್ತಿ ಕುಡಿದು ಕಾರು ಚಾಲನೆ ಮಾಡಿದ ಘಟನೆ ಮಣಿಪಾಲ ಕಾಯಿನ್ ಸರ್ಕಲ್ ಬಳಿ ತಡರಾತ್ರಿ ನಡೆದಿದೆ.
ಪಬ್‌ವೊಂದರಲ್ಲಿ ಕುಡಿದು ಹೊರಬಂದ 5 ಮಂದಿ ಯುವಕರ ತಂಡ ಕಾರಿನಲ್ಲಿತ್ತು. ಈ ವೇಳೆ ಯುವಕನೋರ್ವ ಅಡ್ಡಾದಿಡ್ಡಿ ಕಾರು ಚಲಾಯಿಸಿದಾಗ
ಗಾಬರಿಗೊಂಡ ಜನ ಬೊಬ್ಬೆ ಹೊಡೆದಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಯುವಕ ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದಾಗ ಎರಡು ಕಾರುಗಳು ಜಖಂಗೊಂಡಿವೆ.
ಶಿವಮೊಗ್ಗದ ಸುಹಾಸ್ ಕಾರು ಚಲಾಯಿಸುತ್ತಿದ್ದ ಯುವಕ ಎಂದು ಗುರುತಿಸಲಾಗಿದ್ದು, ಆತನ ಜೊತೆ ಕಾರಿನಲ್ಲಿ ಇನ್ನೂ ನಾಲ್ಕು ಮಂದಿ ಇದ್ದರು. ಬಳಿಕ ಈತ ಪೆರಂಪಳ್ಳಿ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಾನೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ಚಾಲಕ ಡ್ರಿಂಕ್ ಅಂಡ್ ಡ್ರೈವ್ ಮಾಡಿರುವುದು ಸಾಬೀತಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
04/09/2022 07:18 pm