ಹೆಬ್ರಿ: ತಾಲೂಕಿನ ಚಾರ ಗಾಮದ ಕಾರಾಡಿ ತೋಟದ ಮನೆಯಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ದಾಸ್ತಾನಿರಿಸಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಹೆಬ್ರಿ ವಲಯ ಅರಣ್ಯಾಧಿಕಾರಿಗಳ ತಂಡ ಮತ್ತು ಅರಣ್ಯ ಸಂಚಾರಿದಳದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಜಾಗದ ಮಾಲೀಕ, ಗುತ್ತಿಗೆದಾರ ಎಚ್. ವಾದಿರಾಜ ಶೆಟ್ಟಿ ಎಂಬವರು ಇತ್ತೀಚೆಗೆ ಖರೀದಿಸಿದ ಜಮೀನಿನಲ್ಲಿ ಹೊಸ ತೋಟ ನಿರ್ಮಿಸಲು ಹಳೆಯ ಅಡಕೆ ಮರಗಳನ್ನು ಕಡಿಯುವಾಗ ಜಮೀನಿನಲ್ಲಿ ಹಲಸು, ಹೆಬ್ಬಲಸು, ಬೋಗಿ ಸಹಿತ ಹಲವು ಜಾತಿಯ ನೂರಾರು ಮರಗಳನ್ನು ಕಡಿದು ಅಕ್ರಮವಾಗಿ ದಾಸ್ತಾನು ಇಟ್ಟಿದ್ದರು. ಅರಣ್ಯ ಸಂಚಾರಿ ದಳದವರು ಮರಗಳನ್ನು ವಶಕ್ಕೆ ಪಡೆದಿದ್ದು ತಪ್ಪಿತಸ್ಥರ ವಿರುದ್ಧ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ, ಉಪ ವಲಯ ಅರಣ್ಯಾಧಿಕಾರಿ ಕರುಣಾಕರ ಆಚಾರ್ಯ, ರಾಕೇಶ್, ರಕ್ಷಕ ಜಯರಾಮ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
03/09/2022 12:26 pm