ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡ್ರಗ್ಸ್ ದಂಧೆ ವಿರುದ್ಧ ಕಾರ್ಯಾಚರಣೆ: 40 ಮಂದಿ ವಿರುದ್ಧ ಪ್ರಕರಣ, ಹಲವರು ಪೊಲೀಸರ ವಶಕ್ಕೆ

ಉಡುಪಿ: ಉಡುಪಿಗೆ ನೂತನ ಎಸ್ಪಿ ಬಂದ ಬಳಿಕ ಮಾದಕ ದ್ರವ್ಯದ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದೆ. ಜಿಲ್ಲಾ ಪೊಲೀಸರು ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿ ಒಟ್ಟು 40 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದು ,ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಪು ಬಳಿ ವಿನಯ ನಗರದ ಮುಸ್ತಾಫ್ (30), ಅಶ್ರಫ್(35), ಉಡುಪಿ ನಗರ ಠಾಣಾ ವ್ಯಾಪ್ತಿಯ ಕುತ್ಪಾಡಿ ಗ್ರಾಮದ ಅನಂತಕೃಷ್ಣ ನಗರದ ಬಳಿ ಸ್ಥಳೀಯ ನಿವಾಸಿ ಇರ್ಷಾದ್ ಖಾನ್(32), ನಗರದ ಬೋರ್ಡ್ ಹೈಸ್ಕೂಲ್ ಬಳಿ ಶಿರಿಬೀಡುವಿನ ಶರ್ವೀನ್ (20), ಕುಂಜಿಬೆಟ್ಟು ಎಂಜಿಎಂ ಕಾಲೇಜು ಎದುರು ಮಾರ್ಪಳ್ಳಿಯ ಸಮೀದ್ (20) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಜಂಕ್ಷನ್ ಬಳಿ ರೋಬನ್ ಡಿ ಅಡಾ(21), ಉಡುಪಿ ಸೆನ್ ಪೊಲೀಸರು ಕಾರ್ಕಳ ರಾಮಸಮುದ್ರ ಕೆರೆಯ ಬಳಿ ಮಟ್ಟಾಡಿ ಗ್ರಾಮದ ಯೊಗೀಶ್ ಗಾಣಿಗ(25), ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೇಯಸ್(20), ಕೊಪ್ಪ ತಾಲೂಕಿನ ನಂದೀಶ್(22) ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಇವರೆಲ್ಲ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಮಾದಕ ದ್ರವ್ಯದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈತನಕ ಮೂರು ದಿನಗಳಲ್ಲಿ ಒಟ್ಟು 40 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರವಾಸಿ ತಾಣಗಳು, ಶಿಕ್ಷಣ ಸಂಸ್ಥೆಗಳ ಪರಿಸರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದ್ದು ಕಾರ್ಯಾಚರಣೆ ಮುಂದುವರೆಯಲಿದೆ.

Edited By : Nagaraj Tulugeri
PublicNext

PublicNext

24/08/2022 03:19 pm

Cinque Terre

15.64 K

Cinque Terre

2

ಸಂಬಂಧಿತ ಸುದ್ದಿ