ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮತ್ತೆ ಕೇಳಿಸಿದ ಗುಂಡಿನ ಸದ್ದು: ನಟೋರಿಯಸ್ ಕ್ರಿಮಿನಲ್ ಗೆ ಗುಂಡೇಟು

ಮಂಗಳೂರು: ಪ್ರಕರಣವೊಂದರಲ್ಲಿ ಸ್ಥಳ ಮಹಜರು ಮಾಡಲು ಬಂದ ವೇಳೆ ಪೊಲೀಸ್ ಮೇಲೆಯೇ ದಾಳಿ ನಡೆಸಿರುವ ನಟೋರಿಯಸ್ ಕ್ರಿಮಿನಲ್ ನನ್ನು ಪೊಲೀಸರು ಗುಂಡಿಕ್ಕಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಿಸ್ಟಾ ಅಲಿಯಾಸ್ ಮುಸ್ತಾಕ್(26) ಗುಂಡಿನ ದಾಳಿಗೊಳಗಾದ ಆರೋಪಿ.

ಮಿಸ್ಟಾ ಹಾಗೂ ಆತನ ಗೆಳೆಯ ಆಶಿಕ್, ವಿದ್ಯಾರ್ಥಿ ಯೂಸೂಫ್ ಮಿರ್ಶಾದ್(19) ಮೊಬೈಲ್ ಕಸಿದುಕೊಂಡಿದ್ದಾರೆ‌‌. ಆದ್ದರಿಂದ ಆತನ ಮಾವ ರಮ್ಲಾನ್ ಆಸೀಫ್ ಈ ಬಗ್ಗೆ ವಿಚಾರಿಸಿದ್ದಕ್ಕೆ ಮಿಸ್ಟಾ ಅಲಿಯಾಸ್ ಮುಸ್ತಾಕ್, ವಳಚ್ಚಿಲ್ ಬಳಿಯ ಬದ್ರಿಯಾ ಮದರಸಾ ಬಳಿ ಡ್ರ್ಯಾಗರ್ ನಿಂದ ಚುಚ್ಚಿ ಹಲ್ಲೆಗೈದಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡು ಸ್ಥಳ ಮಹಜರು ಮಾಡುತ್ತಿದ್ದ ವೇಳೆ ಆತ ಏಕಾಏಕಿ ಪೊಲೀಸ್ ಮೇಲೆ ದಾಳಿ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಮತ್ತೊಂದು ಸುತ್ತು ಮಿಸ್ ಫೈರ್ ಆಗಿದ್ದು ಒಂದು ಗುಂಡು ಆತನ ಕಾಲಿಗೆ ಬಿದ್ದಿದೆ‌.

ಆರೋಪಿ ನಡೆಸಿರುವ ದಾಳಿಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ವಿನಾಯಕ ಭಾವಿಕಟ್ಟೆಗೆ ತರಚಿದ ಗಾಯವಾಗಿದ್ದು, ಪೊಲೀಸ್ ಸಿಬ್ಬಂದಿ ಸದ್ದಾಂ ಹುಸೈನ್ ಗೆ ಕೈಗೆ ಗಾಯವಾಗಿದೆ‌. ಆರೋಪಿ‌ ಮಿಸ್ಟಾ ಹಾಗೂ ಪೊಲೀಸ್ ಸಿಬ್ಬಂದಿ ಸದ್ದಾಂ ಹುಸೈನ್, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

22/08/2022 08:00 pm

Cinque Terre

48.08 K

Cinque Terre

2

ಸಂಬಂಧಿತ ಸುದ್ದಿ