ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಹಂತಕರನ್ನು ಬಂಧಿಸಿದ ಪೊಲೀಸರಿಗೆ ಬಹುಮಾನ

ಸುಳ್ಯ: ರಾಜ್ಯ‌ ಹಾಗು ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದು 17 ದಿನಗಳಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರಮುಖ ಆರೋಪಿಗಳು ಸೇರಿ ಒಟ್ಟು 10 ಆರೋಪಿಗಳನ್ನು ಪೋಲೀಸ್ ತಂಡ ಬಂಧಿಸಿ ಕಾನೂನಿನ ಮುಂದೆ ತಂದು ನಿಲ್ಲಿಸಿದೆ.

ಪ್ರವೀಣ್ ನೆಟ್ಟಾರು ಹಂತಕರನ್ನು ಬಂಧಿಸಲು ಸುಮಾರು ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 82 ಪೋಲೀಸರ ತಂಡ ಹಗಲಿರುಳು ಕಾರ್ಯಾಚರಣೆ ನಡೆಸಿದೆ. ಎಸ್ಪಿ, ಡಿವೈಎಸ್ಪಿ, 4 ಇನ್ಸ್‌ಪೆಕ್ಟರ್, 4 ಸಬ್ ಇನ್ಸ್‌ಪೆಕ್ಟರ್, ಹಾಗು ಇತರೆ ಸಿಬ್ಬಂದಿಗಳ ತಂಡದ ಕಾರ್ಯವನ್ನು ಇದೀಗ ರಾಜ್ಯ ಪೋಲೀಸ್ ಇಲಾಖೆ ಗುರುತಿಸಿದೆ. ಪೋಲೀಸರ ಈ ಕಾರ್ಯಾಚರಣೆಗೆ ಎಲ್ಲೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸ್ವತಹ ರಾಜ್ಯ ಪೋಲೀಸ್ ಮಹಾನಿರ್ದೇಶಕರು ಇಲಾಖೆಯಿಂದ 10 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲಾ ಸಿಬ್ಬಂದಿಗಳಿಗೂ ಈ ಹಣವನ್ನು ಇದೀಗ ಹಂಚಲಾಗಿದೆ. ಮಂಗಳೂರಿನ ಪೋಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ತಂಡದ ಎಲ್ಲಾ ಸಿಬ್ಬಂದಿಗಳಿಗೂ ಬಹುಮಾನ ಹಾಗು ಪ್ರಶಂಸನಾ ಪತ್ರವನ್ನು ನೀಡಿದ್ದಾರೆ.

ಪ್ರಕರಣದ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಬ್ ಇನ್ಸ್‌ಪೆಕ್ಟರ್ ಗಿಂತ ಕೆಳ‌ಹಂತದ ಸಿಬ್ಬಂದಿಗಳಿಗೆ ಮೂರು ಶ್ರೇಣಿಯಲ್ಲಿ ಬಹುಮಾನದ ಮೊತ್ತವನ್ನು ವಿತರಿಸಲಾಗಿದೆ. ಪ್ರಮುಖ ಕಾರ್ಯಾಚರಣೆ ಮಾಡಿದ‌ ಸಿಬ್ಬಂದಿಗಳಿಗೆ ತಲಾ 12 ಸಾವಿರ, ಬಳಿಕದ ಕಾರ್ಯಾಚರಣೆ ಮಾಡಿದ ಸಿಬ್ಬಂದಿಗಳಿಗೆ ಕ್ರಮವಾಗಿ 7 ಸಾವಿರ ಮತ್ತು 5 ಸಾವಿರ ರೂಪಾಯಿಗಳನ್ನು ನೀಡಲಾಗಿದೆ. ಸಬ್ ಇನ್ಸ್‌ಪೆಕ್ಟರ್ ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ತಲಾ 25 ಸಾವಿರ ರೂಪಾಯಿಗಳನ್ನು ಬಹುಮನವಾಗಿ ವಿತರಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

22/08/2022 03:11 pm

Cinque Terre

6.59 K

Cinque Terre

1

ಸಂಬಂಧಿತ ಸುದ್ದಿ