ಕಡಬ : ಆರು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಮೀನು ಅಂಗಡಿ ಧ್ವಂಸ ಹಾಗೂ ಮಾರಕಾಸ್ತ್ರ ದಾಳಿ ಪ್ರಕರಣ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನುವ ಆರೋಪದಲ್ಲಿ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಚುಚ್ಚಿದ ಘಟನೆ ಕಡಬ ಕೊಯಿಲ ಗ್ರಾಮದ ಎಂತಾರು ಎಂಬಲ್ಲಿ ತಡರಾತ್ರಿ ನಡೆದಿದೆ.
ನೌಫಾಲ್ ಹಾಗು ನವಾಜ್ ಮಧ್ಯೆ ಈ ಗಲಾಟೆ ನಡೆದಿದ್ದು ಈ ವೇಳೆ ನೌಫಾಲ್ ನವಾಜ್'ನ ಹೊಟ್ಟೆಗೆ ಚೂರಿಯಿಂದ ಇರಿದಿದ್ದು ಪರಿಣಾಮ ನವಾಜ್ ಗೆ ತೀವ್ರವಾದ ಗಾಯವಾಗಿದ್ದು ಸದ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸದ್ಯ ಈ ಕುರಿತು ನವಾಜ್ ಎಂಬಾತ ನೌಫಾಲ್ ವಿರುದ್ಧ ಕಡಬ ಪೊಲೀಸರಿಗೆ ದೂರು ನೀಡಿದ್ದು ಐಪಿಸಿ ಸೆಕ್ಷನ್ 504,323,326,506 ರ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಸದ್ಯ ಆರೋಪಿ ನೌಫಲ್ ನನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರಿದಿದೆ.
PublicNext
16/08/2022 02:18 pm