ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಇಡೀ ಏರಪೋರ್ಟ್‌ನ್ನೇ ಆತಂಕಕ್ಕೆ ತಳ್ಳಿದ 'you're the bomber' ಮೆಸೇಜ್

ಮಂಗಳೂರು: 'you're the bomber' ಎಂಬ ಈ ಒಂದು ಲೈನ್ ವಾಟ್ಸ್‌ಆಪ್ ಮೆಸೇಜ್ ಮಂಗಳೂರು ವಿಮಾನ ನಿಲ್ದಾಣವನ್ನು ಅಕ್ಷರಶಃ ಬೆಚ್ಚಿಬೀಳುವಂತೆ ಮಾಡಿತ್ತು. ಯುವಕ- ಯುವತಿಯ ನಡುವೆ ಹಾಸ್ಯದ ರೀತಿಯಲ್ಲಿ ನಡೆದ ವಾಟ್ಸ್‌ಆಪ್ ಚ್ಯಾಟಿಂಗ್ ನಿಂದ ವಿಮಾನ ನಿಲ್ದಾಣದ ಭದ್ರತೆಗೆ ತೊಡಕಾಗಿದೆ ಎಂಬ ಆತಂಕಕ್ಕೆ ದೂಡಿತ್ತು. ಇದೀಗ ಈ ಜೋಡಿಯನ್ನು ಬಜ್ಪೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ರವಿವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಿಮ್ರಾನ್ ಶೆಟ್ಟಿ ಎಂಬವರು ತಮ್ಮ ಮುಂದಿನ ಸೀಟ್ ನಲ್ಲಿ ಕೂತಿದ್ದ ದಿಪಿಯಾನ್ ಮಾಜಿ ಎಂಬ ಯುವಕನ ಮೊಬೈಲ್ ಗೆ ಸಿಮ್ರಾನ್ ಟಾಮ್ ಎಂಬಾಕೆ 'among all the muslims, youre the bomber' ಎಂಬ ಸಂದೇಶ ಕಳುಹಿಸಿದ್ದಾಗಿ ಇಂಡಿಗೋ ವಿಮಾನದ ಮ್ಯಾನೇಜರ್ ಕೆ.ಪಿ.ಬೋಪಣ್ಣರಿಗೆ ದೂರು ಬರುತ್ತದೆ. ತಕ್ಷಣ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಿಬ್ಬಂದಿ ಸಿನಾನ್ ರಿಂದ ಮಾಹಿತಿ ಪಡೆದು ಸಿಐಎಸ್ ಎಫ್ ಸಿಬ್ಬಂದಿ ಮೂಲಕ ವಿಮಾನದಲ್ಲಿ ಪರಿಶೀಲನೆ ‌ನಡೆಸಿದ್ದಾರೆ.

ಟೇಕ್ ಆಫ್‌ಗೆ ಸಿದ್ದವಾಗಿದ್ದ ಮುಂಬೈ ವಿಮಾನವನ್ನು ತಡೆದು ಎಲ್ಲಾ ಪ್ರಯಾಣಿಕರನ್ನು ಇಳಿಸಿ ತೀವ್ರ ತಪಾಸಣೆ ನಡೆಸಲಾಗಿದೆ. ಅಲ್ಲದೇ ಮೆಸೇಜ್ ಬಂದಿರುವ ದಿಪಿಯಾನ್ ಮಾಜಿ ಎಂಬ ಯುವಕನ ಮೊಬೈಲ್ ತಪಾಸಣೆ ನಡೆಸಿದ್ದು, ಮೆಸೇಜ್ ಕಳುಹಿಸಿದ ಯುವತಿ ಕೂಡ ಅದೇ ಏರ್ ಪೋರ್ಟ್‌ನಲ್ಲಿ ಬೆಂಗಳೂರು ತೆರಳುವ ವಿಮಾನದಲ್ಲಿ ಇರುವುದು ಗೊತ್ತಾಗಿದೆ. ತಕ್ಷಣ ಆಕೆಯನ್ನೂ ವಶಕ್ಕೆ ಪಡೆದು ವಿಮಾನ ತಪಾಸಣೆ ‌ನಡೆಸಲಾಗಿದೆ. ಕೊನೆಗೆ ಇದೊಂದು ತಮಾಷೆ ಸಂದೇಶ ಅಂತ ಗೊತ್ತಾದ ಬಳಿಕ ಹಾಗೂ ತೀವ್ರ ತಪಾಸಣೆ ‌ನಂತರ ಸಂಜೆ ವೇಳೆ ವಿಮಾನ ಮತ್ತೆ ಹಾರಾಟ ‌ನಡೆಸಿದೆ.

ಯೂ ಆರ್ ದಿ ಬಾಂಬರ್ ಒಂದು ಪದದ ಸಂದೇಶ ಇಡೀ ವಿಮಾನ ನಿಲ್ದಾಣವನ್ನು ಆತಂಕಕ್ಕೆ ತಳ್ಳಿತ್ತು. ಸದ್ಯ ಮಂಗಳೂರಿನ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂಡಿಗೋ ವಿಮಾನದ ಮ್ಯಾನೇಜರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಐಪಿಸಿ 505(1)(b) ಮತ್ತು (c) ನಡಿ ಪ್ರಕರಣ ದಾಖಲಾಗಿದ್ದು, ಯುವಕ ಮತ್ತು ಯುವತಿ ವಿಚಾರಣೆ ಮುಂದುವರೆದಿದೆ.‌

Edited By : Abhishek Kamoji
PublicNext

PublicNext

15/08/2022 02:44 pm

Cinque Terre

30.04 K

Cinque Terre

6

ಸಂಬಂಧಿತ ಸುದ್ದಿ