ಮುಲ್ಕಿ: ಇಲ್ಲಿನ ಪ್ರತಿಷ್ಠಿತ ವಿಜಯ ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ಸಂಭವಿಸಿ ಕರ್ನೀರೆ ನಿವಾಸಿ ಸುಜನ್ ಶೆಟ್ಟಿ (20) ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸರು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹೇಶ್, ದರ್ಶನ್, ರೋಹಿತ್, ಸನತ್ ಎಂದು ಗುರುತಿಸಲಾಗಿದೆ
ವಿಜಯ ಕಾಲೇಜಿನಲ್ಲಿ ಕಾಲೇಜು ಡೇ ಫಂಕ್ಷನ್ ನಡೆಯುತ್ತಿದ್ದು ಈ ಸಂದರ್ಭ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಹಳೆ ವೈಷಮ್ಯದಿಂದ ಮಾತಿನ ಚಕಮಕಿ ನಡೆದು ಕ್ಷುಲ್ಲಕ ಕಾರಣಕ್ಕೆ ನೂಕಾಟ ತಳ್ಳಾಟ ನಡೆದು ಹಲ್ಲೆ ನಡೆದಿದ್ದು ಮುಲ್ಕಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೋಷಕರ ಒತ್ತಾಯದ ಮೇರೆಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಪ್ರಕರಣವನ್ನು ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಲೇಜಿನಲ್ಲಿ ನಡೆದ ಘಟನೆಯಲ್ಲಿ ಭಾಗಿಯಾದ ಎಲ್ಲ ವಿದ್ಯಾರ್ಥಿಗಳು ಒಂದೇ ತರಗತಿಯವರು ಮತ್ತು ಕಾಲೇಜಿನ ಆವರಣದ ಒಳಗಡೆ ಘಟನೆ ನಡೆದಿರುವುದರಿಂದ ಕಾಲೇಜಿನ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಪ್ರಾಂಶುಪಾಲರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.
Kshetra Samachara
07/08/2022 07:41 pm