ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಹೆಲ್ಮೆಟ್ ಹಾಕದ ಯುವಕನಿಗೆ ಲಾಠಿ ಬೀಸಿದ ಪೊಲೀಸ್

ಸುರತ್ಕಲ್: ರ್‍ಯಾಲಿ, ಸಮಾವೇಶ ಇನ್ನಿತರ ಸಂದರ್ಭ ಜನಪ್ರತಿನಿಧಿಗಳು ಹೆಲ್ಮೆಟ್ ಧರಿಸದೆ ಬೈಕ್ ರ್‍ಯಾಲಿ ನಡೆಸುತ್ತಾರೆ. ಈ ವೇಳೆ ದಂಡ ವಿಧಿಸದ, ಲಾಠಿ ಬೀಸದ ಪೊಲೀಸರು ಜನಸಾಮಾನ್ಯರ ಮೇಲೆ ಪ್ರಹಾರ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಸುರತ್ಕಲ್ ಪ್ರದೇಶದಲ್ಲಿ ಫಾಝಿಲ್ ಹತ್ಯೆಯ ಬಳಿಕ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ ನಿರ್ಬಂಧವೂ ಇದೆ. ಈ ಹಿನ್ನೆಲೆಯಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಜನಸಂಚಾರ, ವಾಹನ ಸಂಚಾರಕ್ಕೆ ಕಡಿವಾಣವಿದೆ. ನಿನ್ನೆ ಸಂಜೆ ಪೊಲೀಸರು ಭದ್ರತೆಯಲ್ಲಿದ್ದ ವೇಳೆ ಯುವಕನೋರ್ವನು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ಪೊಲೀಸಪ್ಪನೊಬ್ಬ ಯುವಕನಿಗೆ ಲಾಠಿ ಬೀಸಿದ್ದಾನೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿರ್ಬಂಧವಿದ್ದರೂ ವಾಹನ ಸಂಚಾರ: 35 ಕ್ಕೂ ಅಧಿಕ ವಾಹನಗಳು ವಶಕ್ಕೆ

ರಾತ್ರಿ ನಿರ್ಬಂಧವಿದ್ದರೂ ದ್ವಿಚಕ್ರ ಮತ್ತು ಕಾರುಗಳಲ್ಲಿ ಓಡಾಟ ನಡೆಸಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ. ಈ ವೇಳೆ ಸವಾರರನ್ನು ತರಾಟೆಗೆ ತೆಗೆದುಕೊಂಡ ಕಾರವಾರ ಡಿವೈಎಸ್ಪಿ ಮತ್ತು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಪ್ಪ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪ್ರಕರಣದಲ್ಲಿ 25ಕ್ಕೂ ಅಧಿಕ ದ್ವಿಚಕ್ರ ವಾಹನಗಳು, 10ಕ್ಕೂ ಅಧಿಕ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ನೀತಿಪಾಠ ಮಾಡಿ ಬಿಡುಗಡೆಗೊಳಿಸಿದ್ದಾರೆ.

Edited By :
PublicNext

PublicNext

03/08/2022 11:32 am

Cinque Terre

44.9 K

Cinque Terre

1

ಸಂಬಂಧಿತ ಸುದ್ದಿ