ಸುಳ್ಯ: ನನ್ನ ಪತಿ ಆರೋಪಿಯಲ್ಲ. ಅವರನ್ನು ಮನೆಯಿಂದ ತನಿಖೆ ಇದೆ ಎಂದು ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಇದೀಗ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಬಂಧಿತ ಶಫೀಕ್ ಪತ್ನಿ ಅನ್ಸಿಫಾ ದೂರಿದ್ದಾರೆ.
ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಯ ತನಿಖೆಯು ಪ್ರಗತಿಯಲ್ಲಿದೆ. ಈ ಸಂಬಂಧ ಇಬ್ಬರ ಆರೋಪಿಗಳಾದ ಝಕೀರ್ ಮತ್ತು ಶಫೀಕ್‌ನನ್ನು ಪೊಲೀಸರು ಬಂಧಿಸಿದ್ದಾಗಿ ಎಂದು ಎಡಿಜಿಪಿ ಅಲೋಕ್ ಕುಮಾರ್ ಮತ್ತು ಎಸ್‌ಪಿ ರಿಷಿಕೇಶ್ ಸೋನಾವಣೆ ದೃಢಕರಿಸಿದ್ದಾರೆ.
ಈ ಮಧ್ಯೆ ಆರೋಪಿ ಶಫಿಕ್ ಬೆಳ್ಳಾರೆ ಎಂಬುವರ ಪತ್ನಿ ಅನ್ಸಿಫಾ ಬೆಳ್ಳಾರೆ ಪೊಲೀಸ್ ಠಾಣೆಗೆ ಬಂದು ತನ್ನ ಪತಿ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಆರೋಪಿಯಲ್ಲ. ಅವರನ್ನು ಉದ್ದೇಶ ಪೂರ್ವಕವಾಗಿ ಆರೋಪಿಯನ್ನಾಗಿ ಮಾಡಲಾಗಿದೆ. ಮನೆಯಲ್ಲಿದ್ದ ಅವರನ್ನು ತನಿಖೆ ಇದೆ ಎಂದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ನಮಗೆ ಅವರನ್ನು ನೋಡಲು ಸಹ ಬಿಡುತ್ತಿಲ್ಲ. ಅವರನ್ನು ಕರೆದುಕೊಂಡು ಬಂದು 24ಗಂಟೆಗಳು ಕಳೆದಿದೆ. ಇದೀಗ ಅವರನ್ನು ಆರೋಪಿ ಎನ್ನಲಾಗಿದೆ. ಅವರು ಕೊಲೆ ಆರೋಪಿಯಲ್ಲ ಎಂದು ಅನ್ಸಿಫಾ ಹೇಳಿದ್ದಾರೆ.
PublicNext
28/07/2022 04:55 pm