ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕೊಣಾಜೆಯಲ್ಲಿ ರೌಡಿಶೀಟರ್ ಮೇಲೆ ಫೈರಿಂಗ್;ಪೊಲೀಸರಿಗೆ ಹಲ್ಲೆಗೈದು ಓಡುತ್ತಿದ್ದವನ ಕಾಲಿಗೆ ಗುಂಡೇಟು!

ಉಳ್ಳಾಲ: ಬೆಳ್ಳಂಬೆಳಗ್ಗೆ ಪೊಲೀಸರು ರೌಡಿಯೊಬ್ಬನ ಮೇಲೆ ಫೈರಿಂಗ್ ಮಾಡಿದ್ದಾರೆ. ಉಳ್ಳಾಲ ಪೊಲೀಸರ ವಶದಲ್ಲಿದ್ದ ನಟೋರಿಯಸ್ ರೌಡಿ,ಮುಖ್ತಾರ್ ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಲು ಪ್ರಯತ್ನಿಸಿದ್ದು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಮಂಗಳೂರು ಹೊರವಲಯದ ಕೊಣಾಜೆ ಠಾಣೆ ವ್ಯಾಪ್ತಿಯ ಅಸೈಗೋಳಿ ಬಳಿ ಘಟನೆ ನಡೆದಿದ್ದು ಗಾಯಗೊಂಡ ನಟೋರಿಯಸ್ ರೌಡಿಯನ್ನು ಉಳ್ಳಾಲ ಧರ್ಮನಗರ ಬೊಟ್ಟು ನಿವಾಸಿ ಮುಖ್ತಾರ್ ಅಹಮ್ಮದ್(27)ಎಂದು ಗುರುತಿಸಲಾಗಿದೆ.ಗಾಯಾಳು ರೌಡಿಯನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಖ್ತಾರ್ 2014 ರಲ್ಲಿ ಪಾತಕ ಲೋಕಕ್ಕೆ ಎಂಟ್ರಿಯಾಗಿದ್ದು ಕೊಲೆ,ಕೊಲೆಯತ್ನ,ದರೋಡೆ ಸೇರಿದಂತೆ ಸುಮಾರು 15 ಪ್ರಕರಣ ಎದುರಿಸುತ್ತಿದ್ದಾನೆ.ಕಳೆ 5 ವರುಷಗಳಲ್ಲೇ ,6 ಗಂಭೀರ ಪ್ರಕರಣಗಳಲ್ಲಿ ಮುಖ್ತರ್ ತನ್ನನ್ನ ತೊಡಗಿಸಿದ್ದು ಕೇರಳದಲ್ಲಿ ಅವಿತಿದ್ದ ಈತನ ವಿರುಧ್ದ 8 ಜಾಮೀನು‌ ರಹಿತ ವಾರೆಂಟ್ ಜಾರಿಯಾಗಿತ್ತು.

ನಿನ್ನೆ ಉಳ್ಳಾಲ ಪೊಲೀಸರು ಪ್ರಕರಣ ಒಂದರಲ್ಲಿ ಮುಖ್ತರನ್ನು ವಶಕ್ಕೆ ಪಡೆದಿದ್ದರು.ಇಂದು ಬೆಳಿಗ್ಗೆ ಹೆಚ್ಚಿನ ವಿಚಾರಣೆಗೆ ಮುಖ್ತರನ್ನ ಉಳ್ಳಾಲ ಪಿಐ ಸಂದೀಪ್ ಮತ್ತು ತಂಡ ಕೊಣಾಜೆ ಠಾಣೆಯ ಕೂಗಳತೆಯ ಅಸೈಗೋಳಿ ಪ್ರದೇಶಕ್ಕೆ ಸ್ಥಳ ಮಹಜರಿಗೆ ಕರೆದೊಯ್ದಿದ್ದಾರೆ.ಈ ವೇಳೆ ಬೈಕ್ ಪೊದೆಯಲ್ಲಿದೆ ಎಂದು ಹೇಳಿದ ಮುಖ್ತರ್ ಪೊಲೀಸರಿಗೆ ಹಲ್ಲೆಗೈದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ್ ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ.ಮತ್ತೂ ಮಾತು ಕೇಳದ ರೌಡಿಶೀಟರ್ ಮುಖ್ತರ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ‌ಉಳ್ಳಾಲ ಠಾಣಾ ಪೊಲೀಸ್ ಸಿಬ್ಬಂದಿಗಳಾದ ವಾಸುದೇವ ಚೌಹಾಣ್ ಮತ್ತು ಅಕ್ಬರ್ ಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.ಸ್ಥಳಕ್ಕೆ ಮಂಗಳೂರು ನಗರ ಕಮೀಷನರ್ ಎನ್.ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Manjunath H D
PublicNext

PublicNext

17/07/2022 11:10 am

Cinque Terre

66.33 K

Cinque Terre

4

ಸಂಬಂಧಿತ ಸುದ್ದಿ