ಪಬ್ಲಿಕ್ ನೆಕ್ಸ್ಟ್ ಕ್ರೈಮ್ ಫಾಲೊಅಪ್
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ವ್ಯಕ್ತಿಯನ್ನು ಜೀವಂತ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ನಿನ್ನೆಯೇ ಬಂಧಿಸಿದ್ದಾರೆ.ಆರೋಪಿ ಸದಾನಂದ ,ತನ್ನ ತದ್ರೂಪು ವ್ಯಕ್ತಿಯನ್ನು ಕೊಂದು ತಾನು ತಲೆಮರೆಸಿಕೊಳ್ಳುವ ಸಲುವಾಗಿ ಸಿನಮೀಯ ರೀತಿಯಲ್ಲಿ ಈ ಕೊಲೆಗೆ ಮಾಸ್ಟರ್ ಪ್ಲಾನ್ ಹಾಕಿದ್ದ.ಅದಕ್ಕಾಗಿ ಕಾರ್ಕಳದ ಆನಂದ ದೇವಾಡಿಗ ಎಂಬ ಅಮಾಯಕನನ್ನು ,ಹೆಣ್ಣಿನ ಮೋಹಕ್ಕೆ ಸಿಲುಕಿಸಿ ,ಕಾಡಿಗೆ ಕರೆದೊಯ್ದು ಕಾರಿನೊಳಗೆ 9 ಲೀಟರ್ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ.ಇದಕ್ಕೆ ಈತನ ಗೆಳತಿ ಶಿಲ್ಪಾ ಕೂಡ ಸಾಥ್ ನೀಡಿದ್ದಾಳೆ.
ಇದೀಗ ಆರೋಪಿ ಸದಾನಂದ ಶೇರಿಗಾರ್ ಕೊಲೆ ನಡೆಸುವ ಮುನ್ನ ಬ್ರಹ್ಮಾವರ ತಾಲೂಕಿನ ಸಾಸ್ತಾನ ಟೋಲ್ ನಲ್ಲಿ ಕಾರ್ ಮೂಲಕ ಪಾಸಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದೇ ಸಾಸ್ತಾನ ಟೋಲ್ ಮೂಲಕ ಕೊಲೆಯಾದ ಆನಂದ ದೇವಾಡಿಗರನ್ನು ಕಿಡ್ನಾಪ್ ಮಾಡಲಾಗಿತ್ತು.ಕಾರಿನಿಂದ ಇಳಿದು ಟೋಲ್ ಹಣ ಕಟ್ಟಿದ್ದ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಒಂದೇ ದಿನದೊಳಗೆ ನಾಲ್ವರನ್ನು ಬಂಧಿಸಿದ್ದಾರೆ.ಪೊಲೀಸರಿಗೆ ಲಭಿಸಿದ ಟೆಕ್ನಿಕಲ್ ಕ್ಲೂ ಮೂಲಕ ತನಿಖೆ ಮುಂದುವರೆದಿದ್ದು ಇನ್ನಷ್ಟು ಸಂಗತಿಗಳು ಬಯಲಾಗಬೇಕಿವೆ.
PublicNext
15/07/2022 04:27 pm