ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಚಕ ತಿರುವಿನತ್ತ "ಸುಟ್ಟ ಕಾರಿನಲ್ಲಿ ಶವ ಪತ್ತೆ" ಪ್ರಕರಣ!

ಬೈಂದೂರು: ಜಿಲ್ಲೆಯ ಬೈಂದೂರು ತಾಲೂಕಿನ ಒತ್ತಿನೆಣೆಯ ಕಾಡಿನಲ್ಲಿ ಸುಟ್ಟ ಕಾರಿನೊಳಗೆ ಅಪರಿಚಿತ ಶವ ಪತ್ತೆಯಾದ ಪ್ರಕರಣ ರೋಚಕ ತಿರುವಿನತ್ತ ಸಾಗುತ್ತಿದೆ. ಸುಟ್ಟ ಕಾರಿನಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆಯಾದ ಪ್ರಕರಣವನ್ನು ಬೈಂದೂರು ಠಾಣೆಯಲ್ಲಿ ಕೊಲೆ ಪ್ರಕರಣವ ಎಂದು ದಾಖಲಿಸಲಾಗಿದೆ. ಹಾಗಾದರೆ ಇದೊಂದು ಕೊಲೆಯೇ?

ಕಾರ್ಕಳ ಮೂಲದ ಸದಾನಂದ ಶೇರಿಗಾರ್ ಎಂಬವರಿಗೆ ಸೇರಿದ ಪೋರ್ಡ್ ಕಂಪೆನಿಯ ಕಾರು ಇದು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಜು.12 ರಂದು ರಾತ್ರಿ 10.30 ರಿಂದ 11 ಗಂಟೆಯ ನಡುವೆ ಈ ಕಾರು ಸಾಸ್ತಾನ ಟೋಲ್ ಗೇಟ್ ಮೂಲಕ ಪ್ರವೇಶಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಸಂದರ್ಭ ಕಾರಲ್ಲಿ ಇಬ್ಬರು ಇದ್ದ ಬಗ್ಗೆ ಪೊಲೀಸೆಇಗೆ ಖಚಿತ ಮಾಹಿತಿ ದೊರೆತಿದೆ. ಮೂಲಗಳ ಪ್ರಕಾರ ಕಾರಲ್ಲಿ ಒಬ್ಬ ಗಂಡಸು ಮತ್ತು ಒಬ್ಬ ಮಹಿಳೆ ಇದ್ದರು !

ಕಾರ್ ನಲ್ಲಿ ಇಬ್ಬರು ಆ ರಾತ್ರಿ ಹೊರಟಿದೆಲ್ಲಿಗೆ ಎಂಬ ಪ್ರಶ್ನೆಯೊಂದಿಗೆ ಕಾರನ್ನು ಸದಾನಂದ ಶೇರಿಗಾರ್ ಅವರೇ ಚಲಾಯಿಸುತ್ತಿದ್ದರೇ ಅಥವಾ ಬೇರೆ ಯಾರಾದರೂ ಕಾರನ್ನು ಅವರಿಂದ ಪಡೆದುಕೊಂಡು ತೆರಳುತ್ತಿದ್ದರೇ ಎಂಬ ಅನುಮಾನವನ್ನು ಹುಟ್ಟು ಹಾಕಿದೆ.ಇದೊಂದು ನಿಗೂಢ ಪ್ರಕರಣವಾಗಿರುವುದರಿಂದ ,

ಮಂಗಳೂರಿನಿಂದ ಎಫ್.ಎಸ್.ಎಲ್ ತಂಡ ಆಗಮಿಸಿ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದೆ. ಅವರು ಕೊಡುವ ಡಿ.ಎನ್.ಎ ವರದಿಯಲ್ಲಿ ಮೃತ ದೇಹ ಹೆಣ್ಣಿನದ್ದೋ, ಗಂಡಿನದ್ದೋ ಎಂಬುದು ತಿಳಿಯಲಿದೆ.

ಸಾಸ್ತಾನ ಟೋಲ್ ಗೇಟ್ ನಿಂದ ಬೈಂದೂರಿನ ಒತ್ತಿನೆಣೆವರೆಗಿನ 55 ಕಿ.ಮೀ ಉದ್ದದ ರಸ್ತೆಯಲ್ಲಿ ಕಾರಿನಲ್ಲಿದ್ದ ಒಬ್ಬರು ಎಲ್ಲಿಯಾದರೂ ಇಳಿದು, ಒಬ್ಬರೇ ಕಾರಿನಲ್ಲಿ ಒತ್ತಿನೆಣೆ ಕಾಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡರೇ ಎಂಬ ಆಯಾಮದಲ್ಲೂ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಉಡುಪಿ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ಹಾಗು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ನೇತೃತ್ವದಲ್ಲಿ ಗಂಗೊಳ್ಳಿ ಪಿ.ಎಸ್.ಐ ವಿನಯ್ ಹಾಗು ಪಿ.ಎಸ್.ಐ ಪವನ್ ಅವರನ್ನೊಳಗೊಂಡ ಎರಡು ತಂಡವನ್ನು ರಚಿಸಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ.ಇನ್ನೆರಡು ದಿನಗಳಲ್ಲಿ ಈ ಪ್ರಕರಣದ ಸಂಪೂರ್ಣ ವಿವರ ಹೊರಬರುವ ನಿರೀಕ್ಷೆ ಇದೆ.

Edited By : Somashekar
Kshetra Samachara

Kshetra Samachara

14/07/2022 06:25 pm

Cinque Terre

14.53 K

Cinque Terre

0

ಸಂಬಂಧಿತ ಸುದ್ದಿ