ಪಾವಂಜೆ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಸೇತುವೆ ಬಳಿ ಸ್ಕೂಟರ್ ಬಿಟ್ಟು ನಾಪತ್ತೆಯಾದ ಮಂಡ್ಯ ಮದ್ದೂರು ತೂಬಿನಕೆರೆ ನಿವಾಸಿ ರಾಕೇಶ್ ಗೌಡ (26) ಶವ ನಂದಿನಿ ನದಿಯಲ್ಲಿ ಪತ್ತೆಯಾಗಿದೆ.
ಬೆಳಗ್ಗಿನಿಂದ ಅಗ್ನಿಶಾಮಕ ದಳ, ಎಸ್ ಡಿ ಆರ್ ಎಫ್ ಪಡೆ ಪಾವಂಜೆ ಸೇತುವೆಯ ಕೆಳಗಿನ ಭಾಗದ ನಂದಿನಿ ನದಿಯಿಂದ ಸಸಿಹಿತ್ಲು ವರೆಗೆ ದೋಣಿ ಮೂಲಕ ಪತ್ತೆ ಕಾರ್ಯ ನಡೆಸಿದ್ದು ಮಧ್ಯಾಹ್ನ 3ಕ್ಕೆ ಶವ ಪತ್ತೆಯಾಗಿದೆ.
ನಾಪತ್ತೆಯಾದ ಯುವಕ ರಾಕೇಶ್ ಗೌಡ ಕಳೆದ ಆರು ತಿಂಗಳ ಹಿಂದೆ ಮಂಗಳೂರಿನಲ್ಲಿ ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದು ಪಿಜಿಯಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ರಾತ್ರಿ ಮಿತ್ರನಿಗೆ ಮೊಬೈಲ್ ಮುಖಾಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ರಾತ್ರಿ 9:30ಯಿಂದ 10:30ವರೆಗೆ ಪಾವಂಜೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಲ್ಕಿ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
13/07/2022 08:55 pm