ಸುಬ್ರಹ್ಮಣ್ಯ: ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ 21 ಝೋನ್ ಇದರ ಸದಸ್ಯರ ಖಚಿತ ಮಾಹಿತಿ ಮೇರೆ ಪುತ್ತೂರು ಆರ್.ಟಿ.ಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಇಪ್ಪತ್ತಕ್ಕೂ ಅಧಿಕ ಪ್ರೈವೇಟ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.
ಟೂರಿಸ್ಟ್ ವಾಹನವಾಗಿ ಪರವಾನಿಗೆ ಪಡೆಯದೇ ಸರ್ಕಾರಕ್ಕೆ ವಂಚಿಸಿ ಪ್ರೈವೇಟ್ ವಾಹನದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಬರುತ್ತಿರುವ ಬಗ್ಗೆ ಹಲವು ದೂರುಗಳನ್ನು ಬಂದಿದ್ದವು. ಈ ಬಗ್ಗೆ KTDO ಸದಸ್ಯರು ಪುತ್ತೂರು ಆರ್.ಟಿ.ಓ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹಿನ್ನೆಲೆಯಲ್ಲಿ ಮಂಗಳವಾರ ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಸುಮಾರು 20ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
Kshetra Samachara
29/06/2022 10:35 pm