ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ತಂದೆಯ ಮಾನಸಿಕ ಖಿನ್ನತೆಗೆ ಬಲಿಯಾದ ಮಕ್ಕಳ ಅಂತ್ಯಸಂಸ್ಕಾರ: ಹರಿದು ಬಂದ ಜನಸಾಗರ

ಮುಲ್ಕಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಶೆಟ್ಟಿಗಾಡು ನಿವಾಸಿ ಹಿತೇಶ್ ಎಂಬಾತ ತನ್ನ ಪತ್ನಿ ಹಾಗೂ ಮೂರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಆತ್ಮಹತ್ಯೆಗೆ ಯತ್ನ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೂರು ಮಕ್ಕಳು ಮೃತ ಪಟ್ಟಿದ್ದಾರೆ. ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ಮರಣೋತ್ತರ ಪರೀಕ್ಷೆ ನಡೆದು ಬಳಿಕ ಕೆರೆಕಾಡು ಹಿಂದೂ ರುದ್ರಭೂಮಿಯಲ್ಲಿ ಮಕ್ಕಳ ಅಂತ್ಯಸಂಸ್ಕಾರ ನಡೆಯಿತು.

ಈ ಸಂದರ್ಭ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂತು. ಮೃತ ಮಕ್ಕಳ ಮನೆಯಲ್ಲಿ ಮನೆಯವರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹಿತೇಶ್‌ನ ಮಾನಸಿಕ ಖಿನ್ನತೆ ಮೌನ, ಆರ್ಥಿಕ ಮುಗ್ಗಟ್ಟು ಮೂರು ಮಕ್ಕಳನ್ನು ಬಲಿಪಡೆಯಿತು. ಹಿತೇಶ್ ಮೊದಲಿಗೆ ಚೆನ್ನಾಗಿಯೇ ಇದ್ದ. ಎರಡನೇ ಪುತ್ರ ಉದಯ ಜನಿಸಿದ ನಂತರ ಇವನಲ್ಲಿ ಬದಲಾವಣೆಯ ಆರಂಭವಾಯಿತು ಎಂದು ಪತ್ನಿ ಲಕ್ಷ್ಮಿ ತನ್ನ ಅಳಲು ತೋಡಿಕೊಂಡಿದ್ದಾರೆ. ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಅಂಗವೈಕಲ್ಯವು ಮಾನಸಿಕ ಖಿನ್ನತೆಗೆ ಕಾರಣವಾಗಿತ್ತು. ಜೊತೆಗೆ ಸಾಲದ ಹೊರೆ ಬೇರೆ ಇತ್ತು. ಜೂ.24 ರಂದು ಮೃತ ಉದಯನ ಹುಟ್ಟು ಹಬ್ಬಕ್ಕೆ ಮುಂಗಡವಾಗಿ ಕಿನ್ನಿಗೋಳಿಯ ಬೇಕರಿಯಲ್ಲಿ ಕೇಕ್ ಬುಕ್ ಮಾಡಲಾಗಿತ್ತು. ಆದರೇ ಅದನ್ನ ಅಂತಿಮ ಸಂಸ್ಕಾರದ ಸಮಯದಲ್ಲಿ ಇಟ್ಟು ಸುಡಲಾಯಿತು.

ಕಟೀಲು ಪ್ರೌಢ ಶಾಲೆಯ ವಿದ್ಯಾರ್ಥಿ ಮೃತ ರಶ್ಮಿತಾ ಸ್ಮರಣಾರ್ಥ ಶಾಲೆಗೆ ರಜೆ ಘೋಷಿಸಲಾಗಿತ್ತು. ಅದೇ ರೀತಿಯಲ್ಲಿ ಉದಯ ಪುನರೂರು ಶಾಲೆ , ದಕ್ಷ ಕಲಿಯುತ್ತಿರುವ ಪದ್ಮನೂರು ಅಂಗನವಾಡಿ ಶಾಲೆಗೂ ರಜೆ ನೀಡಲಾಗಿತ್ತು. ಆದರೆ ಆರೋಪಿ ಹಿತೇಶ್‌ಗೆ ಮಕ್ಕಳ ಅಂತ್ಯ ಸಂಸ್ಕಾರಕ್ಕೆ ಭಾಗವಹಿಸಲು ಅವಕಾಶ ನೀಡಿಲ್ಲ. ಶಾಸಕ ಉಮಾನಾಥ ಕೋಟ್ಯಾನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.

Edited By :
PublicNext

PublicNext

24/06/2022 07:50 pm

Cinque Terre

61.79 K

Cinque Terre

8

ಸಂಬಂಧಿತ ಸುದ್ದಿ