ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಅಕ್ರಮ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಡಿ.ಸಿ. ವಿರುದ್ಧವೇ ಧರಣಿ"

ಉಡುಪಿ: ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ದಾಖಲೆ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕಾನೂನು ಕ್ರಮಕೈಗೊಳ್ಳದೇ ಉದಾಸೀನ ಭಾವನೆ ತೋರಲಾಗುತ್ತಿದೆ. ಇದರ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಜೂ.20ರಂದು ಧರಣಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ (ಭೀಮ ವಾದ) ರಾಜ್ಯ ಸಂಚಾಲಕ ಶೇಖರ್ ಹಾವಂಜೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ

ಅವರು, ಜಿಲ್ಲೆಯ ಮೆಡಿಕಲ್ ಮಾಫಿಯಾಗೆ ಕಡಿವಾಣ

ಹಾಕುವಂತೆ ಮತ್ತು ತಪ್ಪಿತಸ್ಥ ಬಿಎಎಂಎಸ್ ವೈದ್ಯರು (ಆರ್ಯುವೇದಿಕ್)ಗಳ ಮೇಲೆ ಕ್ರಮ ಕೈಗೊಂಡು ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡಬೇಕೆಂದು ಡಿ.ಸಿ.‌ ಗೆ ದೂರು ನೀಡಲಾಗಿತ್ತು. ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ನಕಲಿ ಪರಿಶಿಷ್ಟ ಮೊಗೇರ ಜಾತಿ ಪ್ರಮಾಣ ಪತ್ರ ಪಡೆದು ಸರಕಾರಕ್ಕೆ ವಂಚನೆ ಮಾಡಿರುವ ಬಗ್ಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

ಅದೇ ರೀತಿ 30 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಬ್ರಹ್ಮಾವರ ಸೀತಾನದಿ ರಾಜ್ಯ ಹೆದ್ದಾರಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ, ಕರ್ಜೆಯ ಮೀಸಲು ಅರಣ್ಯ ಭೂಮಿಯಲ್ಲಿ ಪರಿಶಿಷ್ಟ ಪಂಗಡದ ನಿಧಿಯನ್ನು ದುರ್ಬಳಕೆ ಮಾಡಿ ರಸ್ತೆ ನಿರ್ಮಾಣ, ಚಾಂತಾರು ಗ್ರಾಪಂನಿಂದ ಅಂಗಡಿಕೋಣೆಗಳ ಬಾಡಿಗೆ ಯಲ್ಲಿ ಭ್ರಷ್ಟಾಚಾರ, ಬೈಂದೂರು ಉಪತಹಶೀಲ್ದಾರ್ ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಿಕೊಂಡಿರುವ ಬಗ್ಗೆ, ಜಿಲ್ಲೆಯಲ್ಲಿ ಆಯುಷ್ಮಾನ್ ಯೋಜನೆ ಮತ್ತು ಅದರ ದೂರುಗಳಿಗೆ ಸ್ಪಂದಿಸದ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ತನಕ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ಅನಿರ್ದಿಷ್ಠಾವಧಿ ಧರಣಿ ಕೈಗೊಳ್ಳುವುದಾಗಿ ಹೇಳಿದರು.

Edited By : Somashekar
Kshetra Samachara

Kshetra Samachara

15/06/2022 08:06 pm

Cinque Terre

8.65 K

Cinque Terre

2