ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ: ತಲವಾರಿನಿಂದ ಕೇಕ್ ಕಟ್ ಪೊಲೀಸ್ ದಾಳಿ,ಆರೋಪಿಗಳ ಬಂಧನ!

ಪಡುಬಿದ್ರಿ: ಇಲ್ಲಿಗೆ ಸಮೀಪದ ಮನೆಯೊಂದರಲ್ಲಿ ಮೇ 30ರಂದು ಹುಟ್ಟುಹಬ್ಬವನ್ನು ತಲವಾರಿನಿಂದ ಕೇಕ್ ಕತ್ತರಿಸಿ ಆಚರಿಸಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.ಈ ವೇಳೆ ತಲವಾರು ಮತ್ತು ಕೊಡಲಿಗಳನ್ನು ಇಟ್ಟುಕೊಂಡೇ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ರೌಡಿಶೀಟರ್ ಜಿತೇಂದ್ರ ಶೆಟ್ಟಿ ಹಾಗೂ ಆತನ ಸಹಚರರ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿತೇಂದ್ರ ಶೆಟ್ಟಿ ಸಹಿತ ಪಲಿಮಾರಿನ ಸೂರಜ್ ಸಾಲ್ಯಾನ್, ನಡ್ಸಾಲಿನ ತನುಜ್ ಕರ್ಕೇರ, ಪಡುಬಿದ್ರಿಯ ಅನ್ವೀಶ್, ಕೆಮ್ಮುಂಡೇಲಿನ ನಿರಂಜನ್ ಶೆಟ್ಟಿಗಾರ್,ಕಂಚಿನಡ್ಕದ ಗಣೇಶ್ ಪೂಜಾರಿ, ಪಲಿಮಾರಿನ ಶರತ್ ಶೆಟ್ಟಿ ಈ ಪ್ರಕರಣದ ಆರೋಪಿಗಳು. ದಾಳಿ ನಡೆದ ವೇಳೆ ಅಲ್ಲಿದ್ದ ರೌಡಿಶೀಟರ್ ಜಿತೇಂದ್ರ ಶೆಟ್ಟಿ ,ಗಣೇಶ್ ಪೂಜಾರಿ, ಶರತ್ ಶೆಟ್ಟಿಯನ್ನು ಬಂಧಿಸಲಾಗಿದೆ.

ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆಹಾಜರುಪಡಿಸಲಾಗಿದೆ.ಆರೋಪಿಗಳಿಂದ ಒಂದು ತಲವಾರು, ಒಂದು ಮಚ್ಚು ಹಾಗೂ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.

Edited By :
Kshetra Samachara

Kshetra Samachara

04/06/2022 09:18 am

Cinque Terre

11.99 K

Cinque Terre

4

ಸಂಬಂಧಿತ ಸುದ್ದಿ