ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ : ಶಿಲ್ಪಾ ದೇವಾಡಿಗ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರಿಗೆ ಕಠಿಣ ಶಿಕ್ಷೆ ನೀಡಿ

ಕುಂದಾಪುರ: ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಅವರ ಸಾವಿಗೆ ನ್ಯಾಯ ಒದಗಿಸಬೇಕು ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ದೇವಾಡಿಗ ಸಮಾಜ ಸೇವಾ ಸಂಘ ಕುಂದಾಪುರದ ವತಿಯಿಂದ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಅವರಿಗೆ ಇವತ್ತು ಮನವಿ ಸಲ್ಲಿಸಲಾಯಿತು.

ಸುಳ್ಳು ಪ್ರೀತಿಗೆ ಬಲಿಯಾಗಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ ,ದೇವಾಡಿಗ ಸಮಾಜದವದ್ದಾರೆ. ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಅವರ ಸಾವಿಗೆ ನ್ಯಾಯ ಒದಗಿಸಬೇಕು. ಈಕೆಯ ಆತ್ಮಹತ್ಯೆಗೆ ಸ್ಥಳೀಯ ಅಜೀಜ್ ದಂಪತಿ ಪ್ರಚೋದನೆ ನೀಡಿದ್ದಾರೆ.

ಈ ದಂಪತಿಗೆ ಕಠಿಣ ಶಿಕ್ಷೆಗೆ ನೀಡಬೇಕು ಮತ್ತು ಮೃತ ಶಿಲ್ಪಾ ದೇವಾಡಿಗ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಆರ್ಥಿಕ ಪರಿಹಾರ ಒದಗಿಸಬೇಕು ಎಂದು ಕುಂದಾಪುರ ಎ.ಸಿ ಅವರಿಗೆ ಮನವಿ ಸಲ್ಲಿಸಲಾಯಿತು. ನಂತರ ಶಿಲ್ಪಾ ದೇವಾಡಿಗರ ಉಪ್ಪಿನಕುದ್ರು ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಲಾಯಿತು.

Edited By :
Kshetra Samachara

Kshetra Samachara

30/05/2022 07:30 pm

Cinque Terre

10.19 K

Cinque Terre

1

ಸಂಬಂಧಿತ ಸುದ್ದಿ