ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಬಹುಕೋಟಿ ಉದ್ಯಮಿಗೆ ಸಾಲ ನೀಡಿದ್ದೇ ಮುಳುವಾಯಿತು?

ಪಬ್ಲಿಕ್ ನೆಕ್ಸ್ಟ್ ಕ್ರೈಂ ಫಾಲೊಅಪ್

ವರದಿ: ರಹೀಂ ಉಜಿರೆ

ಕುಂದಾಪುರ: ಇಂದು ಬೆಳಿಗ್ಗೆ ಉಡುಪಿ ಜಿಲ್ಲೆ ಆ ಸುದ್ದಿ ಕೇಳಿ ಬೆಚ್ಚಿಬಿದ್ದಿತ್ತು. ಉದ್ಯಮಿ ಕಟ್ಟೆ ಗೋಪಾಲಕೃಷ್ಣ(80) ತಮ್ಮ ರಿವಾಲ್ವರ್ ನಿಂದ

ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಅದು.ಇವರು ಅಂತಿಂಥ ಉದ್ಯಮಿಯಲ್ಲ , ಬಹುಕೋಟಿ ಉದ್ಯಮಿ, ಕುಂದಾಪುರದ ಪ್ರಸಿದ್ಧ ಚಿನ್ಮಯಿ ಆಸ್ಪತ್ರೆ ಮಾಲೀಕ. ಬೆಂಗಳೂರಿನಲ್ಲೂ ಹೊಟೇಲುಗಳನ್ನು ಹೊಂದಿದ್ದಾರೆ.ಬೆಳಿಗ್ಗೆ ಇವರ ಆತ್ಮಹತ್ಯೆ ಸುದ್ದಿ ಕೇಳಿ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದರು.ಇದೀಗ ಅವರು ಬರೆದ ಡೆತ್ ನೋಟ್ ಲಭ್ಯವಾಗಿದ್ದು ಅದರಲ್ಲಿ ಕುತೂಹಲಕಾರಿ ಸಂಗತಿಗಳು ದಾಖಲಾಗಿವೆ.

ಡೆತ್ ನೋಟ್ ನಲ್ಲೇನಿದೆ?

ಇಂತಹ ಬಹುಕೋಟಿ ಉದ್ಯಮಿಗೆ ಯಾವ ಸಮಸ್ಯೆ ಇತ್ತು? ಎಂಬತ್ತರ ಹರೆಯದಲ್ಲೂ ಗುಂಡು ಹೊಡೆದುಕೊಂಡು ಸಾಯುವಂತಹ ಸಮಸ್ಯೆ ಏನಿತ್ತು ಎಂಬ ಪ್ರಶ್ನೆಯನ್ನು ಜನ ಕೇಳಿಕೊಳ್ಳುತ್ತಿದ್ದಾರೆ.ನೀವು ನಂಬಲೇಬೇಕು ,ಇವರು ಕೊಟ್ಟ ಸಾಲವೇ ಇವರನ್ನು ಇಹಲೋಕ ಯಾತ್ರೆ ಮುಗಿಸುವಂತೆ ಮಾಡಿದೆ.

ಡೆತ್ ನೋಟ್ ನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ, ಇಸ್ಮಾಯಿಲ್ ಹಂಗಳೂರು ಎಂಬಿಬ್ಬರ ಹೆಸರು ಪ್ರಸ್ತಾಪ ಮಾಡಿರುವ ಭೋಜಣ್ಣ, ಇವರಿಬ್ಬರು ಗೋಲ್ಡ್ ಜ್ಯುವೆಲ್ಲರಿ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ 2012 ಫೆಬ್ರವರಿ 3 ರಂದು 3 ಕೋಟಿ 34 ಲಕ್ಷ ರೂ. ನಗದು, 5 ಕೆ.ಜಿ ಚಿನ್ನ ಪಡೆದುಕೊಂಡಿದ್ದರು. ಆ ಬಳಿಕ ನಗ-ನಗದು, ಅದಕ್ಕೆ ಸಲ್ಲಬೇಕಾದ ಬಡ್ಡಿಯನ್ನೂ ವಾಪಾಸ್ ಮರಳಿಸಿರಲಿಲ್ಲ ಎಂದು ಬರೆದಿದ್ದಾರೆ.

ಈ ವಿಚಾರದಲ್ಲಿ ಹಲವು ಬಾರಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಪಂಚಾಯತಿಕೆ ಮಾಡಿದ್ದು ವಾಯಿದೆ ಪಡೆದಿದ್ದರು. ಈವರೆಗೆ 9 ಕೋಟಿ ಮೊತ್ತದ ಹಣ, ಚಿನ್ನ ವಾಪಾಸ್ ನೀಡದೆ ಮೋಸ ಮಾಡಿದ್ದು ಗಣೇಶ್ ಶೆಟ್ಟಿ ಮೊಳಹಳ್ಳಿ ಮನೆಗೆ ತಿರುಗಿ ತಿರುಗಿ ಸಾಕಾಯ್ತು. ಅವರ ಮನೆಯಲ್ಲಿಯೇ ನನ್ನ ರಿವಾಲ್ವರ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.

ಗಣೇಶ್ ಶೆಟ್ಟಿ ಮೊಳಹಳ್ಳಿ, ಇಸ್ಮಾಯಿಲ್ ಅವರಿಂದ ಹಣ ರಿಕವರಿ ಮಾಡಿ, ಆ ಹಣವನ್ನು ಮನೆಯವರಿಗೆ ಕೊಡಿಸಿ ಎಂದು ಆತ್ಮಹತ್ಯೆಗೆ ಶರಣಾದ ಕಟ್ಟೆ ಗೋಪಾಲಕೃಷ್ಣ ರಾವ್ (ಕಟ್ಟೆ ಭೋಜಣ್ಣ) ಡೆತ್ ನೋಟ್'ನಲ್ಲಿ ಉಲ್ಲೇಖಿಸಿದ್ದಾರೆ.

ಕುಂದಾಪುರ ಠಾಣೆ ಎಸ್.ಎಚ್.ಓ ಅವರಿಗೆ ಬರೆದ ಡೆತ್ ನೋಟ್'ನಲ್ಲಿ ಈ ಉಲ್ಲೇಖ ಮಾಡಲಾಗಿದೆ.ಡೆತ್ ನೋಟ್ ಬಗ್ಗೆ ಸಮಗ್ರ ತನಿಖೆ ಮಾಡಿದರೆ ಪ್ರಕರಣದ ಸತ್ಯಾಸತ್ಯತೆ ಹೊರಬರಬಹುದು.

Edited By : Somashekar
PublicNext

PublicNext

26/05/2022 11:07 pm

Cinque Terre

53.63 K

Cinque Terre

5

ಸಂಬಂಧಿತ ಸುದ್ದಿ