ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲ್ವೆ ಪೊಲೀಸರ ಸಕಾಲಿಕ ಕಾರ್ಯಾಚರಣೆ : ಬಾಲಕಿ ರಕ್ಷಣೆ

ಉಡುಪಿ : ಡಿ.13ರಂದು ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಅಪಹರಿಸಲಾದ 16ರ ಹರೆಯದ ಬಾಲಕಿಯನ್ನು ಕೊಂಕಣ ರೈಲ್ವೆ ಪೊಲೀಸ್ ಪಡೆ ರಕ್ಷಿಸಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಈ ಕುರಿತು ಮಲ್ಪೆ ಠಾಣೆಯಲ್ಲಿ ದಾಖಲಾದ ಎಫ್ ಐಆರ್ ಹಿನ್ನೆಲೆಯಲ್ಲಿ ಉಡುಪಿ ರೈಲ್ವೆ ನಿಲ್ದಾಣದ ರೈಲ್ವೆ ಪೊಲೀಸರು ನಿಲ್ದಾಣದ ಸಿಸಿ ಟಿವಿ ದೃಶ್ಯಾವಳಿ ಹಾಗೂ ರೈಲ್ವೆ ರಿಸರ್ವೇಶನ್ ಪಟ್ಟಿಯನ್ನು ಪರಿಶೀಲಿಸಿದಾಗ, ಈ ಬಾಲಕಿ ಕುರ್ಲಾದತ್ತ ತೆರಳುತ್ತಿದ್ದ ರೈಲು ನಂ.22114ನ್ನು ಹತ್ತಿರುವುದನ್ನು ಖಚಿತಪಡಿಸಿ ಕೊಂಡರು.

ತಕ್ಷಣ ಅವರು ಕೆಆರ್ ಸಿಎಲ್ ನ ಕಂಟ್ರೋಲ್ ರೂಮಿಗೆ ಮಾಹಿತಿಯನ್ನು ರವಾನಿಸಿದರು. ಮಾಹಿತಿಯನ್ನನುಸರಿಸಿ ಕುರ್ಲಾದ ಇನ್ ಸ್ಪೆಕ್ಟರ್ ಅವರು ಕಾಶಿಯತ್ತ ತೆರಳುತಿದ್ದ ರೈಲು ನಂ.15017ನ್ನು ಪರಿಶೀಲಿಸಿದಾಗ ಇದರ ಎಸ್ ಕೋಚ್ ನ ಬರ್ತ್ ನಂ.11ರಲ್ಲಿ ಈ ಬಾಲಕಿ ಪತ್ತೆಯಾದಳು. ಬಾಲಕಿಯ ಬಗ್ಗೆ ಹಾರ್ದಾ ಆರ್ ಪಿಎಫ್ ನಿಂದ ಮಾಹಿತಿ ಸಂಗ್ರಹಿಸಿ ಅದನ್ನು ಮಲ್ಪೆ ಪೊಲೀಸರಿಗೆ ರವಾನಿಸಲಾಗಿದೆ.

ಉಡುಪಿ ರೈಲ್ವೆ ಪೊಲೀಸ್ ಪಡೆಯ ಇನ್ ಸ್ಪೆಕ್ಟರ್ ಅಮಿತ್ ಯಾದವ್, ಕಾನ್ ಸ್ಟೇಬಲ್ ಸಜೀರ್ ಹಾಗೂ ಮಹಿಳಾ ಕಾನ್ ಸ್ಟೇಬಲ್ ಝೀನಾ ಪಿಂಟೊ ಅವರ ಅವಿರತ ಪ್ರಯತ್ನಗಳಿಂದ ಅಪಹೃತ ಬಾಲಕಿಯನ್ನು ರಕ್ಷಿಸಿ, ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/12/2021 03:53 pm

Cinque Terre

14.36 K

Cinque Terre

3

ಸಂಬಂಧಿತ ಸುದ್ದಿ