ಉಡುಪಿ: ಮನೆಗೆ ಬೀಗ ಹಾಕಿ ದೂರದೂರುಗಳಿಗೆ ತೆರಳುವ ಸಾರ್ವಜನಿಕರು ಸಮೀಪದ ಠಾಣೆಗೆ ಮಾಹಿತಿ ನೀಡಿದರೆ ಕಳ್ಳತನ ತಪ್ಪಿಸಬಹುದು ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಸ್ಪಿ , ಮನೆಯ ಹೊರಗಡೆ ಕಾಣುವಂತೆ ಬೀಗ ಹಾಕುವುದಕ್ಕಿಂತ ಲಾಕ್ ಸಿಸ್ಟಮ್ ಮಾಡಿದರೆ ಒಳ್ಳೆಯದು. ದೊಡ್ಡ ಬೀಗ ಹೊರಗೆ ಕಾಣುವಾಗ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎಂದು ಗೊತ್ತಾಗುತ್ತದೆ. ಅಲ್ಲದೆ, ಹಾಲು-ಪತ್ರಿಕೆ ಮನೆ ಹೊರಗೇ ಇದ್ದಾಗಲೂ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲದಿರುವ ಸುಳಿವು ಸಿಗುತ್ತದೆ. ಹಾಗಾಗಿ ಪತ್ರಿಕೆ, ಹಾಲು ಇತ್ಯಾದಿ ದಿನಗಟ್ಟಳೆ ಹೊರಗಡೆ ಇಡಬೇಡಿ. ಬೀಗ ಹಾಕಿ ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಿದರೆ ನೈಟ್ ಬೀಟ್ ನವರು ಆ ಏರಿಯಾದ ಮೇಲೆ ಗಮನ ಇಡುತ್ತಾರೆ. ಇದರಿಂದ ಕಳ್ಳತನ ತಪ್ಪಿಸಬಹುದು ಎಂದು ಎಸ್ಪಿ ಹೇಳಿದ್ದಾರೆ.
Kshetra Samachara
23/11/2021 02:52 pm