ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಶೂಟೌಟ್ ಪ್ರಕರಣ: ರಾಜೇಶ್ ಪ್ರಭುವಿಗೆ ಷರತ್ತುಬದ್ಧ ಜಾಮೀನು

ಮಂಗಳೂರು: ನಗರದ ಮೋರ್ಗನ್ಸ್‌ಗೇಟ್ ಶೂಟೌಟ್ ಪ್ರಕರಣದ ಆರೋಪಿ ರಾಜೇಶ್ ಪ್ರಭುವಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾದ ಪ್ರತಿವಾದವನ್ನು ಆಲಿಸಿರುವ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ‌ದ ನ್ಯಾಯಾಧೀಶ ಅಭಯ್ ಧನ್ ಪಾಲ್ ಚೌಗಾಲ ಅವರು ಆರೋಪಿ ರಾಜೇಶ್ ಪ್ರಭುವಿನ ಪಿಸ್ತೂಲ್ ನಿಂದ ಆಕಸ್ಮಿಕವಾಗಿ ಗುಂಡು ಹಾರಲ್ಪಟ್ಟಿದೆ.‌ ಅಲ್ಲದೆ, ಪ್ರಕರಣದಲ್ಲಿ ಆರೋಪಿಯ ಪುತ್ರನೇ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಿದ್ದಾರೆ.

ಆದರೆ, ಆರೋಪಿಯಿಂದ ನ್ಯಾಯಾಲಯವು 5 ಲಕ್ಷ ರೂ. ಬಾಂಡ್ ಪಡೆದಿದೆ. ಆರೋಪಿ ರಾಜೇಶ್ ಪ್ರಭು ಪರ ನ್ಯಾಯವಾದಿಗಳಾದ ವೈ. ವಿಕ್ರಂ ಹೆಗ್ಡೆ, ನರಸಿಂಹ ಹೆಗ್ಡೆ ವಾದಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

02/11/2021 10:06 pm

Cinque Terre

23.04 K

Cinque Terre

1