ಮಂಗಳೂರು: ಸಿಎಂಗೆ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸೇರಿದಂತೆ ನಾಲ್ವರು ಆರೋಪಿಗಳಿಗೆ ಮಂಗಳೂರು 2ನೇ ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ಸೆ.18ರಂದು ನಗರದ ಹೊಟೇಲೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರ ನಂಜನಗೂಡಿನಲ್ಲಿ ದೇವಾಲಯ ಕೆಡವಿರುವ ವಿಚಾರದಲ್ಲಿ ಸಿಎಂಗೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ. ಅಲ್ಲದೆ, ಹಿಂದೂ ಮಹಾಸಭಾ ಪಕ್ಷದ ಸ್ವಘೋಷಿತ ನಾಯಕ ಎಂದು ಹೇಳಿಕೊಂಡು ಅಸಂಬದ್ಧ ಹೇಳಿಕೆ ನೀಡಿದ್ದಾರೆ ಎಂದು ಎಂಟು ಮಂದಿ ವಿರುದ್ಧ ಡಾ.ಲೋಹಿತ್ ಕುಮಾರ್ ಸುವರ್ಣ ಎಂಬವರು ಬರ್ಕೆ ಪೊಲೀಸರಿಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಧರ್ಮೇಂದ್ರ ಸೇರಿದಂತೆ ರಾಜೇಶ್ ಪವಿತ್ರನ್, ಪ್ರೇಮ್ ಪೊಳಲಿ ಹಾಗೂ ಸಂದೀಪ್ ಶೆಟ್ಟಿ ಎಂಬ ನಾಲ್ವರು ಹಿಂದೂ ಮಹಾಸಭಾದ ಮುಖಂಡರನ್ನು ಬಂಧಿಸಲಾಗಿತ್ತು. ಧರ್ಮೇಂದ್ರಗೆ ಸೆ.22ರವರೆಗೆ ಎರಡು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿತ್ತು. ಇತರೆ ಆರೋಪಿಗಳಿಗೆ ಮಂಗಳವಾರ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸದ್ಯ ನಾಲ್ವರೂ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.
Kshetra Samachara
22/09/2021 10:41 pm