ಮಂಗಳೂರು:ನ್ಯಾಯಾಲಯದ ಆರನೇ ಮಹಡಿಯಿಂದ ಹಾರಿ ಪೋಕ್ಸೋ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.
ಉಳ್ಳಾಲದ ಕಿನ್ಯಾ ನಿವಾಸಿ ರವಿರಾಜ್ (31), ಆತ್ಮಹತ್ಯೆ ಮಾಡಿಕೊಂಡ ಯುವಕ. ಆಗಸ್ಟ್ 30ರಂದು ಪೋಕ್ಸೋ ಪ್ರಕರಣದಡಿ ರವಿರಾಜ್ ಬಂಧಿತನಾಗಿದ್ದ. ಕುಡಿದ ಮತ್ತಿನಲ್ಲಿ ತೊಕ್ಕೊಟ್ಟುವಿನಲ್ಲಿ ಈತ ಅಪ್ರಾಪ್ತಗೆ ಲೈಂಗಿಕ ಕಿರುಕುಳ ನೀಡಿದ್ದ. ರವಿರಾಜ್ ನನ್ನು ಹಿಡಿದು
ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದರು. ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಕೋರ್ಟ್ ನ ಆರನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Kshetra Samachara
31/08/2021 06:29 pm