ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಸ್ವಸ್ಥ ಆರೋಪಿ ಸ್ಟ್ರೇಚರ್ ನಲ್ಲಿಯೇ ನ್ಯಾಯಾಲಯಕ್ಕೆ ಹಾಜರು: ಗರಂ ಆದ ನ್ಯಾಯಾಧೀಶರು

ಮಂಗಳೂರು: ಪ್ರಕರಣವೊಂದರ ಆರೋಪಿಯಾಗಿದ್ದ ಅನಾರೋಗ್ಯ ಪೀಡಿತನೋರ್ವನನ್ನು ಸ್ಟ್ರೇಚರ್ ನಲ್ಲಿಯೇ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

ನಗರದ ಅಡ್ಡೂರು ಗ್ರಾಮದ ಮಹಮ್ಮದ್ ಎಂಬಾತನ ಮೇಲೆ ಹಲವು ವರ್ಷಗಳ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೊಂಬಿ, ಕೊಲೆ ಪ್ರಕರಣ ದಾಖಲಾಗಿತ್ತು. ಇದೀಗ ಅವರು ಅಸೌಖ್ಯದಿಂದ ಹಾಸಿಗೆ ಹಿಡಿದು, ಕುಟುಂಬ ವರ್ಗದವರಿಂದ ದೂರವಾಗಿ ಮುಲ್ಕಿ ಕಾರ್ನಾಡ್ ನ‌ ಆಪದ್ಬಾಂಧವ ಆಸೀಫ್ ಅವರ ಅನಾಥಾಶ್ರಮ ಸೇರಿದ್ದಾರೆ. ಆದರೆ ಪೊಲೀಸರು ಅವರು ಕೋರ್ಟ್ ಗೆ ಹಾಜರಾಗುವಂತೆ ಒತ್ತಡ ಹೇರಿದ್ದರು. 'ಅಸೌಖ್ಯದಿಂದ ಅವರು ಮಲಗಿದಲ್ಲಿಯೇ ಇದ್ದು, ನಡೆಯಲಾರದ ಸ್ಥಿತಿಯಲ್ಲಿದ್ದಾರೆ' ಎಂದು ಹೇಳಿದರೂ ಕೋರ್ಟ್ ಗೆ ಹಾಜರು ಪಡಿಸುವಂತೆ ಪೊಲೀಸರು ಒತ್ತಾಯಿಸಿದ್ದಾರೆ.

ಆದ್ದರಿಂದ ಮಹಮ್ಮದ್ ನನ್ನು ಆಪದ್ಬಾಂಧವ ಆಸೀಫ್ ಆ್ಯಂಬುಲೆನ್ಸ್ ನಲ್ಲಿ ದ.ಕ.ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದು ಸ್ಟ್ರೇಚರ್ ನಲ್ಲೇ ಮಲಗಿಸಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ. ಆದರೆ ಆರೋಪಿ ಸ್ಥಿತಿ ಗಂಭೀರವಾಗಿದ್ದರೂ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುವ ಅಗತ್ಯವೇನಿತ್ತು ಎಂದು ಪೊಲೀಸರನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಆರೋಪಿಯನ್ನು ಅನಾಥಾಶ್ರಮಕ್ಕೆ ಕರೆದೊಯ್ಯಲಾಯಿತು.

Edited By : Nagaraj Tulugeri
Kshetra Samachara

Kshetra Samachara

13/08/2021 09:26 pm

Cinque Terre

19.44 K

Cinque Terre

6