ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸೂಪರ್ ಮಾರ್ಕೇಟ್ ತೂಕದಲ್ಲಿ ಮೋಸ

ಮಂಗಳೂರು: ನಗರದಲ್ಲಿರುವ ರಿಲಯನ್ಸ್ ಮಾರ್ಕೇಟ್ ನಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ.

ಮಂಗಳೂರು ನಗರದ ಚಿಲಿಂಬಿಯಲ್ಲಿ ಇರುವ ರಿಲಯನ್ಸ್ ಸೂಪರ್ ಮಾರ್ಕೇಟ್ ನಲ್ಲಿ ಪ್ರತೀ ವಸ್ತುಗಳ ಖದೀದಿಯ ವೇಳೆ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಇರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತೂಕದಲ್ಲಿ ಸರಾಸರಿ 200ರಿಂದ 400ಗ್ರಾಂ ವರೆಗೂ ಮೋಸ ಮಾಡಲಾಗುತ್ತಿದೆ. ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಹಂಚುವಂತೆ ವ್ಯಕ್ತಿಯೊಬ್ಬರು ಮಾತನಾಡುತ್ತಿರುವುದು ವೀಡಿಯೊದಲ್ಲಿದೆ.

ಆದರೆ, ಈ ವೀಡಿಯೋ ಯಾರು ? ಯಾವಾಗ? ತೆಗೆದಿದ್ದಾರೆ ಎಂಬ ಮಾಹಿತಿ ನೀಡಲಾಗಿಲ್ಲ. ಆದರೆ, ಕಳೆದ ಎರಡು ದಿನಗಳಿಂದ ಈ ವೀಡಿಯೊ ಹೆಚ್ಚಿನ ಸಂಖ್ಯೆಯಲ್ಲಿ ವೈರಲ್ ಆಗುತ್ತಿದೆ.

Edited By : Manjunath H D
Kshetra Samachara

Kshetra Samachara

12/02/2021 10:21 pm

Cinque Terre

36.29 K

Cinque Terre

8

ಸಂಬಂಧಿತ ಸುದ್ದಿ