ಮಂಗಳೂರು: ಸೈಡ್ ಕೊಡೋ ವಿಚಾರದಲ್ಲಿ ಬಸ್ ಚಾಲಕನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಶ್ರಫ್ ಎಂದು ಗುರುತಿಸಲಾಗಿದೆ. ಪಡೀಲ್ ಸಮೀಪದ ಫೈಸಲ್ ನಗರ ಎಂಬಲ್ಲಿ 23 ನಂಬರ್ ನ ಖಾಸಗಿ ಬಸ್ ಹೋಗ್ತಿದ್ದಂತೆಯೇ ಈತ ಸೈಡ್ ಕೊಡೋ ವಿಚಾರದಲ್ಲಿ ಬಸ್ ಚಾಲಕನ ಜೊತೆಗೆ ವಾಗ್ವಾದ ನಡೆಸಿದ್ದ. ಬಳಿಕ ಈ ಬಸ್ ಚಾಲಕ ಸಂಪತ್ ಪೂಜಾರಿ ಅವರ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ ನಡೆಸಿದ್ದ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Kshetra Samachara
21/01/2021 06:18 pm