ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಬಳಿ 8308 ಕೆಜಿ ರಕ್ತ ಚಂದನ ಮರದ 316 ದಿಮ್ಮಿಗಳನ್ನು ಹುಲ್ಲಿನ ಚೀಲದಲ್ಲಿ ಮುಚ್ಚಿ ಸಾಗಿಸುತ್ತಿದ್ದ ವಾಹನಗಳನ್ನು ಮಂಗಳೂರು ಅರಣ್ಯ ಸಂಚಾರಿ ದಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಪ್ರಾದೇಶಿಕ ವಲಯ ಮೂಡುಬಿದಿರೆ ಸಿಬ್ಬಂದಿ ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ವಶ ಪಡಿಸಿ, 7 ಮಂದಿಯನ್ನು ಬಂಧಿಸಿದ್ದಾರೆ. ಒಬ್ಬ ಪರಾರಿಯಾಗಿದ್ದಾನೆ.
ಪ್ರಮುಖ ಆರೋಪಿ ಅನಿಲ್ ಕುಮಾರ್, ಅಲಾಡಿ ರಾಜೇಶ್ ರೆಡ್ಡಿ, ಸುಭಾಷ್ ಎಂ., ಪಾಲರಾಜ್ ಎಸ್., ಶಾಮೀರ್ ಎಸ್., ಕುಂಜ್ಞಿ ಮಹಮದ್, ದಿನೇಶ್ ಕುಮಾರ್ ಕೆ. ಬಂಧಿತರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಚಿದಾನಂದಪ್ಪ ತನಿಖೆ ಮುಂದುವರಿಸಿದ್ದಾರೆ. ವಶ ಪಡಿಸಲಾದ ರಕ್ತಚಂದನ ಅಂದಾಜು 4.15 ಕೋಟಿ ರೂ. ಮೌಲ್ಯದ್ದಾಗಿದೆ.
PublicNext
03/06/2022 08:33 am