ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ್ವಿಚಕ್ರ ಕಳವು ಆರೋಪಿ ಬಂಧನ; 96 ಸಾವಿರ ರೂ. ಮೌಲ್ಯದ‌ ಬೈಕ್ ವಶ

ಮಂಗಳೂರು: ನಗರದ ನಾನಾ ಕಡೆ ಬೈಕ್ ಕಳವು ನಡೆಸುತ್ತಿದ್ದ ಓರ್ವನನ್ನು ಕದ್ರಿ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಬಂಧಿತನನ್ನು ಪಂಜಿಮೊಗರು ಉರುಂದಾಡಿಗುಡ್ಡೆ ನಿವಾಸಿ ಚರಣ್‌ರಾಜ್ (20) ಎಂದು ಮಾಹಿತಿ ನೀಡಿರುವ ಪೊಲೀಸರು, ಈತನಿಂದ 96 ಸಾವಿರ ರೂ. ಮೌಲ್ಯದ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಬಂಧನಕ್ಕೊಳಗಾದ ಆರೋಪಿ ಚರಣ್ ರಾಜ್‌ ತನ್ನ ಸ್ನೇಹಿತರಾದ ಸುಮಂತ್, ವಿಜಯ್ ಎಂಬವರೊಂದಿಗೆ ಸೇರಿಕೊಂಡು ಬೈಕ್ ಗಳನ್ನು ಕಳವು ಗೈಯ್ಯುತ್ತಿದ್ದ ಎಂದು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ‌ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈತನ ವಿರುದ್ಧ ಪಣಂಬೂರು, ಕಾವೂರು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಸುಮಂತ್ ಮತ್ತು ವಿಜಯ ಎಂಬವರು ತಲೆ‌ಮರೆಸಿಕೊಂಡಿದ್ದು ಅವರ ಶೋಧಕಾರ್ಯ ಮುಂದು ವರಿದಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ.

Edited By :
Kshetra Samachara

Kshetra Samachara

03/10/2020 11:28 am

Cinque Terre

27.15 K

Cinque Terre

1

ಸಂಬಂಧಿತ ಸುದ್ದಿ