ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸುರತ್ಕಲ್ ಫ್ಲ್ಯಾಟ್ ನಲ್ಲಿ ನಗ-ನಗದು ಕಳವು ಪ್ರಕರಣ; ಸೀಕ್ರೆಟ್ ಅರಿತ ಸೆಕ್ರೆಟರಿಯಿಂದಲೇ ಕೃತ್ಯ!

ಮಂಗಳೂರು: ಪೊಲೀಸರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಆಗಸ್ಟ್ 15 ರಂದು ಸುರತ್ಕಲ್ ಬಳಿಯ ಫ್ಲ್ಯಾಟ್ ಗೆ ನುಗ್ಗಿ 51 ಲಕ್ಷ ನಗದು, 224 ಗ್ರಾಂ ಚಿನ್ನ ಕಳವಾದ ಬಗ್ಗೆ ಮಾಲಕಿ ವಿದ್ಯಾ ಪ್ರಭು ದೂರು ನೀಡಿದ್ದರು. ಪೆಟ್ರೋಲ್ ಬಂಕ್ ಹೊಂದಿದ್ದ ವಿದ್ಯಾ ಪ್ರಭು ನಗದನ್ನು ಇಟ್ಟು ಹೊರಗಡೆ ಹೋಗಿದ್ದರು. ಇವ್ರ ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ. ವಹಿವಾಟಿಗೆ ಮಾತ್ರ ಫ್ಲ್ಯಾಟನ್ನು ಬಳಸಲಾಗುತ್ತಿತ್ತು‌.

ಈ ಬಗ್ಗೆ ಫ್ಲ್ಯಾಟ್ ಸೆಕ್ರೆಟರಿ ನವೀನ್ ಎಂಬಾತನಿಗೆ ಮಾತ್ರ ಅರಿವಿತ್ತು. ತನಿಖೆ ವೇಳೆ ಫ್ಲ್ಯಾಟ್ ಸೆಕ್ರೆಟರಿಯಿಂದಲೇ ಕಳ್ಳತನಕ್ಕೆ ಸಂಚು ಹೂಡಿರೋದು ಬಯಲಾಗಿದೆ.

ಸುರತ್ಕಲ್ ನಲ್ಲಿ ಬಾರ್ ಮ್ಯಾನೇಜರ್ ಆಗಿದ್ದ ಎಕ್ಸ್ ಮಿಲಿಟರಿ ನವೀನ್, ವೈಟರ್ ಸಂತೋಷ್, ತಿರುವನಂತಪುರ ಮೂಲದ ರಘು, ಅಮೇಶ್ ಎಂಬವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 30.85 ಲಕ್ಷ ನಗದು, ಚಿನ್ನ , ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಕೇರಳ ಮೂಲದ ಇನ್ನಿಬ್ಬರು ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

22/09/2020 01:23 pm

Cinque Terre

33.39 K

Cinque Terre

0

ಸಂಬಂಧಿತ ಸುದ್ದಿ