ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಂದೂರಿನಲ್ಲಿ ಇಂದು ನಡೆದ ಶರತ್ ಮಡಿವಾಳ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ರಾಜ್ಯ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
"ಹರ್ಷ ಹತ್ಯೆ ಆರೋಪಿಗಳು ಜೈಲಿನಿಂದಲೇ ಕರೆ ಮಾಡುತ್ತಿದ್ದರೆ, ಶರತ್ ಹತ್ಯೆಯಾಗಿ ಐದು ವರ್ಷಗಳಾದರೂ ನ್ಯಾಯ ಸಿಕ್ಕಿಲ್ಲ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಏನು ಮಾಡುತ್ತಿದೆ? ಗೋ ಮಾಂಸ ರಫ್ತಾಗುತ್ತಿದೆ, ಲವ್ ಜಿಹಾದ್ ನಡೆಯುತ್ತಿದೆ! ಬಿಜೆಪಿ ಏನು ಮಾಡುತ್ತಿದೆ" ಎಂದು ಹರಿಹಾಯ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರ ನಂ. ವನ್ ಆಗಿದೆ. ಆದರೆ, ಇಲ್ಲೇ ಏಕೆ ಹತ್ಯೆ, ಹಲ್ಲೆ, ಮತಾಂತರ ಆಗುತ್ತಿದೆ? ಎಂದು ಪ್ರಶ್ನಿಸಿದರು. ಗುಜರಾತ್ ಮಾದರಿಯಲ್ಲಿ ಜಿಲ್ಲೆ ನಿಲ್ಲಲಿಲ್ಲ ಎಂದರು. ಗುಜರಾತ್ ನಂತೆಯೇ ಹಳ್ಳಿಹಳ್ಳಿಯಲ್ಲಿ ಪ್ರವೀಣ್ ತೊಗಾಡಿಯಾ ಸಂಘಟಿಸಿದಂತೆ ಹಿಂದು ಸಂಘಟನೆಗಳು ಬಲಿಷ್ಠ ಆಗಬೇಕು ಎಂದರು.
Kshetra Samachara
10/07/2022 06:02 pm