ಉಡುಪಿ: ಎಸಿಬಿ ಇವತ್ತು ಭರ್ಜರಿ ಬೇಟೆ ನಡೆಸಿದೆ. ಭ್ರಷ್ಟಾಚಾರ ನಿಗ್ರಹ ದಳದ 15 ಅಧಿಕಾರಿಗಳ ತಂಡ ಉಡುಪಿಯಲ್ಲಿ ಇಂದು ಮುಂಜಾನೆಯೇ ಭ್ರಷ್ಟ ಅಧಿಕಾರಿಯನ್ನು ಬಲೆಗೆ ಕೆಡವಿದೆ. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ನಗದು ಮತ್ತು ಆಸ್ತಿ ಹೊಂದಿದ್ದು ಪತ್ತೆಯಾಗಿದೆ.
ಸಣ್ಣ ನೀರಾವರಿ ಇಲಾಖೆ ಅಸಿಸ್ಟೆಂಟ್ ಇಂಜಿನಿಯರ್ ಹರೀಶ್ ಬಲೆಗೆ ಬಿದ್ಧ ಅಧಿಕಾರಿ. ಇವರ ಉಡುಪಿಯ ಕೊರಂಗ್ರಪಾಡಿ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ವಿಲಾಸೀ ಬಂಗಲೆಯೊಳಗೆ ತಪಾಸಣೆ ನಡೆಸಿದಾಗ 2 ಕೆ.ಜಿ.ಗೂ ಅಧಿಕ ಚಿನ್ನಾಭರಣ ಪತ್ತೆಯಾಗಿವೆ. ಹರೀಶ್ ಮನೆಯಲ್ಲಿ ಸುಮಾರು 5 ಲಕ್ಷದಷ್ಡು ನಗದು ಸಿಕ್ಕಿದೆ.
ದುಬಾರಿ ಬೆಲೆಯ ವಾಚುಗಳು, 3 ವಾಹನ, ಚಿನ್ನಾಭರಣ ಜೊತೆಗೆ ಚಿನ್ನದ ತಟ್ಟೆ, ಚಿನ್ನದ ತಗಡು ಪತ್ತೆಯಾಗಿವೆ.
ಚಿನ್ನಾಭರಣಗಳಲ್ಲಿ 15ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಸರ, ನೆಕ್ಲೇಸ್, ಬ್ರಾಸ್ಲೆಟ್ , ಉಂಗುರ , ದೇವರ ಮೂರ್ತಿ ಸೇರಿವೆ. ಇನ್ನು ಮನೆಯಲ್ಲಿದ್ದ ಅಪಾರ ಮೌಲ್ಯದ
ಆಸ್ತಿ ಪತ್ರ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿದ್ದಾರೆ. ಸದ್ಯ ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ಸೇರಿದಂತೆ 15 ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
Kshetra Samachara
17/06/2022 12:58 pm