ಮಂಗಳೂರು: ನಗರದ ಕಂಕನಾಡಿ ಮಾರುಕಟ್ಟೆ ಪರಿಸರದ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿದ್ದ ಫಾಸ್ಟ್ ಫುಡ್ ಹೊಟೇಲ್ ನೌಕರನಿಗೆ ಮಂಗಳೂರು ಮನಪಾ 20 ಸಾವಿರ ರೂ. ದಂಡ ವಿಧಿಸಿದೆ.
ಈ ಹಿಂದೆ ಕಂಕನಾಡಿ ಬಳಿಯ ಈ ರಸ್ತೆಯಲ್ಲಿ ತ್ಯಾಜ್ಯ ಎಸೆದು ಬ್ಲ್ಯಾಕ್ ಸ್ಪಾಟ್ ನಿರ್ಮಾಣಗೊಂಡಿತ್ತು. ಆದ್ದರಿಂದ ಈ ಪ್ರದೇಶವನ್ನು ಮಹಾನಗರ ಪಾಲಿಕೆ ಸುಂದರಗೊಳಿಸಿತ್ತು. ಆ ಬಳಿಕ ತ್ಯಾಜ್ಯ ಎಸೆಯುವುದು ನಿಯಂತ್ರಣಕ್ಕೆ ಬಂದಿತ್ತು. ಆದರೆ ಕೆಲ ದಿನಗಳಿಂದ ಇಲ್ಲಿ ತ್ಯಾಜ್ಯ ಕಂಡು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ದಾಳಿ ನಡೆಸಿ ತ್ಯಾಜ್ಯ ಸುರಿಯುತ್ತಿದ್ದ ಫಾಸ್ಟ್ ಫುಡ್ ಹೊಟೇಲ್ ನೌಕರನಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.
Kshetra Samachara
08/06/2022 10:22 pm