ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೌರ ಕಾರ್ಮಿಕರ ಮೇಲೆ ವ್ಯಕ್ತಿಯೊರ್ವ ಕಬ್ಬಿಣದ ರಾಡ್ ಹಿಡಿದು ಹಲ್ಲೆ

ಮಂಗಳೂರು: ಕಸ ವಿಲೇವಾರಿಗೆ ತೆರಳಿದ ಪೌರ ಕಾರ್ಮಿಕರ ಮೇಲೆ ವ್ಯಕ್ತಿಯೊರ್ವ ಕಬ್ಬಿಣದ ರಾಡ್ ಹಿಡಿದು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮೊಟ್ಟೆತ್ತಡ್ಕ ಬಳಿ ನಡೆದಿದೆ. ಹಸಿ ಕಸ, ಒಣ ಕಸವನ್ನು ಬೆರ್ಪಡಿಸದೇ ನೀಡಿದಾಗ ಮನೆಯವರ ಬಳಿ ಪೌರ ಕಾರ್ಮಿಕ ಕಸವನ್ನು ಬೇರ್ಪಡಿಸಿ ಕೊಡಬೇಕೆಂದು ಹೇಳಿದಾಗ ಅ ಮನೆಯ ವ್ಯಕ್ತಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾನೆ.ಮೊಟ್ಟೆತ್ತಡ್ಕ ಜನತಾ ಕಾಲೋನಿಯಲ್ಲಿ ಮನೆಯೊಂದರ ಮುಂದೆ ಕಸ ವಿಂಗಡನೆ ಮಾಡದನ್ನು ಆಕ್ಷೇಪಿಸಿದ ಪೌರಕಾರ್ಮಿಕರು ಕಸವನ್ನು ವಿಂಗಡನೆ ಮಾಡಿಕೊಡಬೇಕು.ವಿಂಗಡನೆ ಮಾಡದ ಕಸವನ್ನು ವಿಲೇವಾರಿ ಮಾಡಲ್ಲ ಮೇಲಾಧಿಕಾರಿಗಳಿಂದ ಈ ಬಗ್ಗೆ ಸ್ಪಷ್ಟ ಅದೇಶವಿದೆ ಎಂದ ಕಾರಣಕ್ಕೆ ಮನೆಯ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ.ಘಟನೆಯನ್ನು ಖಂಡಿಸಿ ಕಸ ವಿಲೇವಾರಿ ಸ್ಥಗಿತಗೊಳಿಸಿ ಪೌರಕಾರ್ಮಿಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಮಾಹಿತಿ ತಿಳಿದ ಪುರಸಭಾ ಅಧಿಕಾರಿ ರೂಪ ಟಿ ಶೆಟ್ಟಿ ಘಟನೆ ಸ್ಥಳದ ಮಾಹಿತಿ ತಿಳಿದು ನಂತರ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

24/11/2020 07:07 pm

Cinque Terre

28.21 K

Cinque Terre

1

ಸಂಬಂಧಿತ ಸುದ್ದಿ