ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಕ್ಕ: ಸ್ಕೂಟರ್ ನಲ್ಲಿ ನಾಲ್ವರ ಜಾಲಿ ರೈಡ್ !; ಜನನಿಬಿಡ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ

ಮುಲ್ಕಿ: ರಾ.ಹೆ. 66ರ ಮುಕ್ಕ ಜಂಕ್ಷನ್ ಬಳಿ ಅಪಾಯಕಾರಿ ರೀತಿಯಲ್ಲಿ ನಾಲ್ವರು ಒಂದು ದ್ವಿಚಕ್ರವಾಹನದಲ್ಲಿ ಪ್ರಯಾಣಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಕೂಟರ್ ನಲ್ಲಿ ನಾಲ್ಕು ಜನ ಕುಳಿತುಕೊಂಡು ಹೆಲ್ಮೆಟ್ ಇಲ್ಲ, ಮಾಸ್ಕ್ ಇಲ್ಲ ಜೊತೆಗೆ ಅಡ್ಡಾ ದಿಡ್ಡಿ ಚಾಲನೆ ಮಾಡಿಕೊಂಡು ಅಪಾಯಕಾರಿ ರಾ.ಹೆ. 66ರ ಜನನಿಬಿಡ ಪ್ರದೇಶ ಮುಕ್ಕ ಜಂಕ್ಷನ್ ಬಳಿ ಟ್ರಾಫಿಕ್ ನಿಯಮ ಉಲ್ಲಂಘಿಸಿ, ಜಾಲಿ ರೈಡ್ ಮಾಡುತ್ತಾ ಸ್ಥಳದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿ ಮಾಡಿದ್ದಾರೆ. ಕೂಡಲೇ ಅಪಾಯಕಾರಿ ಚಾಲನೆ ಮಾಡುವವರ ವಿರುದ್ಧ ಹಾಗೂ ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಟ್ರಾಫಿಕ್ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

12/11/2020 08:19 am

Cinque Terre

32.37 K

Cinque Terre

7

ಸಂಬಂಧಿತ ಸುದ್ದಿ