ಕಾಪು: ಉಚ್ಚಿಲದಲ್ಲಿ ಸ್ಕಾರ್ಪಿಯೋ ಚಾಲಕನ ಅವಾಂತರದಿಂದಾಗಿ ನಾಲ್ಕು ವಾಹನಗಳು ಸರಣಿ ಅಪಘಾತಕ್ಕೆ ತುತ್ತಾಗಿವೆ. ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಸೀದಿ ಎದುರು ಈ ಘಟನೆ ಸಂಭವಿಸಿದೆ.
ಸ್ಕಾರ್ಪಿಯೋ ಚಾಲಕ ಅತೀವೇಗ ಹಾಗೂ ನಿರ್ಲಕ್ಷತೆಯಿಂದ ವಾಹನ ಚಲಾಯಿಸುತ್ತಾ ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ. ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಬಳಿಕ ವಾಹನವನ್ನು ಅಲ್ಲಿ ನಿಲ್ಲಿಸದೆ ಅತಿವೇಗದಿಂದ ಮುಂದೆ ಸಾಗಿ ಅಲ್ಲಿ ಮತ್ತೆ ಎರ್ಟಿಗಾ ಕಾರು, ಬೈಕು ಹಾಗೂ ಮೀನಿನ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಸ್ಕಾರ್ಪಿಯೋ ಕಾರು ಗುದ್ದಿದ ರಭಸಕ್ಕೆ ಎರ್ಟಿಗಾ ಕಾರು ಡಿವೈಡರ್ ಏರಿ ನಿಂತಿದೆ. ಘಟನೆಯಲ್ಲಿ ಓರ್ವ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾಪು ಮತ್ತು ಪಡುಬಿದ್ರೆ ಪೊಲೀಸರು ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
13/10/2022 10:48 pm