ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲದಲ್ಲಿ ಸರಣಿ ಕಳ್ಳತನ ಯತ್ನ; ಪೊಲೀಸರಿಂದ ಕಳ್ಳರ ಪತ್ತೆಗೆ ಚುರುಕು ಕಾರ್ಯಾಚರಣೆ

ಉಚ್ಚಿಲ: ಇಲ್ಲಿನ ಪೇಟೆ ಹಾಗೂ ಪಣಿಯೂರು ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಸರಣಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಕಳ್ಳರು ಅಂಗಡಿ ಮತ್ತು ಹಣಕಾಸು ಸಂಸ್ಥೆಯ ಬೀಗ ಮುರಿದು ಕಳವಿಗೆ ಯತ್ನಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿಲ್ಲ ಎಂದು ತಿಳಿದು ಬಂದಿದೆ.

ಕಳ್ಳರು ತಡರಾತ್ರಿ ಪಣಿಯೂರು ರಸ್ತೆಯ ಟ್ರಾವೆಲ್ಸ್ ಆಫೀಸ್ ನ ಬೀಗ ಮುರಿದು ಒಳ ನುಗ್ಗಿದ್ದು, ಅಲ್ಲಿಂದ ಸಮೀಪದಲ್ಲಿರುವ ಹಣಕಾಸು ಸಂಸ್ಥೆಯೊಂದರ ಬೀಗ ಮುರಿದಿದ್ದಾರೆ. ಬಳಿಕ ಉಚ್ಚಿಲ ಪೇಟೆಯಲ್ಲಿರುವ ದಿನಸಿ ಅಂಗಡಿಗೆ ನುಗ್ಗಿ ಚಿಲ್ಲರೆ ಹಣ ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಸಿ.ಸಿ. ಟಿವಿಯಲ್ಲಿ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಪಿಎಸ್ಐ ದಿಲೀಪ್ ಕುಮಾರ್, ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್, ಪ್ರಾರ್ಥನಾ ಮಂದಿರಗಳಲ್ಲಿ ಕಾವಲುಗಾರರನ್ನು ನೇಮಿಸಲು ನಾವು ಈಗಾಗಲೇ ನೋಟಿಸ್ ನೀಡಿದ್ದೇವೆ. ಆದರೆ, ಕೆಲವರ ನಿರ್ಲಕ್ಷ್ಯದಿಂದಾಗಿ ಕಳ್ಳರಿಗೆ ಮತ್ತಷ್ಟು ಅನುಕೂಲವಾಗಿದೆ. ಕಳವು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

04/11/2020 01:30 pm

Cinque Terre

34.32 K

Cinque Terre

0

ಸಂಬಂಧಿತ ಸುದ್ದಿ