ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿಟ್ಲದಲ್ಲಿ ಒತ್ತಾಯವಾಗಿ ಅಂಗಡಿ ತೆರವುಗೊಳಿಸಲು ದುಷ್ಕರ್ಮಿಗಳಿಂದ ಯತ್ನ

ಮಂಗಳೂರು: 20 ಜನರ ತಂಡ ಏಕಾಏಕಿ ನುಗ್ಗಿ ಅಂಗಡಿಯನ್ನು ಒತ್ತಾಯವಾಗಿ ತೆರವು ಮಾಡಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ಅಂಗಡಿಗೆ ನುಗ್ಗಿ ಪೈಂಟ್ ಮತ್ತು ಇನ್ನಿತರ ವಸ್ತುಗಳನ್ನು ಎಸೆದು ಅಂಗಡಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ಹಿರಿಯರು ಈ ಬಗ್ಗೆ ವಿಚಾರಿಸಿ, ಮಾತುಕತೆ ನಡೆಸಲು ಮುಂದಾಗಿದ್ದರು. ಆವಾಗ ದುಷ್ಕರ್ಮಿಗಳು ಸ್ಥಳೀಯರ ಮೇಲೆಯೇ ಹಲ್ಲೆಗೆ ಮುಂದಾಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Edited By : Manjunath H D
Kshetra Samachara

Kshetra Samachara

31/10/2020 12:01 pm

Cinque Terre

31.12 K

Cinque Terre

0