ಮಂಗಳೂರು: ಮಂಗಳೂರು ಹೊರವಲಯ ಫರಂಗಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಯಾರೂಂತ ಗೊತ್ತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯವರು ಹೇಳಿಕೆ ನೀಡಿದ್ದಾರೆ.
ನಮ್ಮ ಫೋಟೋ ತೆಗೆಯಬೇಕು ಎಂದು ಹೇಳಿ ಮೂವರು ಅಪರಿಚಿತರು ಸ್ಟುಡಿಯೋಗೆ ಬಂದಿದ್ದರು. ಇದೇ ವೇಳೆ ದುಷ್ಕರ್ಮಿಗಳು ಸ್ಟುಡಿಯೋ ಮಾಲೀಕ ದಿನೇಶ್ ಶೆಟ್ಟಿ ಅವರ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾರೆ. ದಾಳಿಯಿಂದ ದಿನೇಶ್ ಅವರ ತಲೆಗೆ ಏಟಾಗಿದೆ. ಗಾಯಗೊಂಡ ಸ್ಟುಡಿಯೋ ಮಾಲೀಕ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ಪತ್ತೆಗೆ ಮೂರು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ಶೋಧ ನಡೆಸುತ್ತಿದೆ. ಹಲ್ಲೆಗೊಳಗಾದ ವ್ಯಕ್ತಿಯ ಆರೋಗ್ಯ ಸ್ಥಿತಿ ಇದೀಗ ಸುಧಾರಿಸುತ್ತಿದೆ ಅಂತ ವೈದ್ಯರು ಮಾಹಿತಿ ನೀಡಿದ್ದಾರೆ. ಆದರೆ ಹೆಚ್ಚುವರಿ ಚಿಕಿತ್ಸೆ ಅಗತ್ಯವಿದೆ ಅಂತ ವೈದ್ಯರು ಹೇಳಿದ್ದಾರೆ ಅಂದರು. ಇನ್ನು ನಾಳೆ ಈದ್-ಮಿಲಾದ್ ಇರುವುದರಿಂದ ಫರಂಗಿಪೇಟೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಅಂದ್ರು.
Kshetra Samachara
28/10/2020 11:04 pm