ಮುಲ್ಕಿ: ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು, ಕೆಲ ದಿನಗಳ ಹಿಂದೆ ಕಳ್ಳತನ ನಡೆದ ಮುಲ್ಕಿಯ ಪುರಾತನ ಶ್ರೀ ಮಾರಿಯಮ್ಮ ಗುಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕಳವು ಪ್ರಕರಣದ ಬಗ್ಗೆ ಪೊಲೀಸರಿಂದ ವಿವರಣೆ ಕೇಳಿದ ಅವರು,
ಶೀಘ್ರ ತನಿಖೆ ನಡೆಸಿ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಮುಲ್ಕಿ ಪೊಲೀಸರಿಗೆ ಸೂಚನೆ ನೀಡಿದರು. ಮುಲ್ಕಿ ಪರಿಸರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಶಾಸಕರು, ನಾಗರಿಕರು ಜಾಗರೂಕತೆಯಿಂದ ಇರುವಂತೆ ತಿಳಿಸಿದರು.
ಈ ಸಂದರ್ಭ ಸ್ಥಳದಲ್ಲಿದ್ದ ಎಸಿಪಿ ಬೆಳ್ಳಿಯಪ್ಪ ಮಾತನಾಡಿ, ಕಳ್ಳತನ ಪ್ರಕರಣ ಪೊಲೀಸ್ ಇಲಾಖೆ ಸವಾಲಾಗಿ ಸ್ವೀಕರಿಸಿದ್ದು, ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಹರ್ಷರಾಜ ಶೆಟ್ಟಿ, ಶೈಲೇಶ್ ಕುಮಾರ್, ಸುಭಾಷ್ ಶೆಟ್ಟಿ,ಮಾಜಿ ಸದಸ್ಯ ಉಮೇಶ್ ಮಾನಂಪಾಡಿ, ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ರಮನಾಥ ಪೈ, ಹರಿಶ್ಚಂದ್ರ ಕೆಎಸ್ ರಾವ್ ನಗರ, ಅರುಣ್ ಭಂಡಾರಿ, ಸುಧೀರ್ ಬಾಳಿಗ, ಪ್ರಸಾದ್ ಕಾಮತ್ ಮತ್ತಿತರರು ಇದ್ದರು.
Kshetra Samachara
19/10/2020 04:50 pm