ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೀನಿನ ಟೆಂಪೋದಲ್ಲಿ ಗೋ ಮಾಂಸ ಸಾಗಾಟ; ಇಬ್ಬರು ವಶಕ್ಕೆ

ಮಂಗಳೂರು: ಮೀನಿನ ಟೆಂಪೋದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಭಜರಂಗದಳ ಕಾರ್ಯಕರ್ತರು ತಡೆದು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಿಂದ ಸಂಶಯದ ಮೇರೆಗೆ ಟೆಂಪೋವನ್ನು ಬೆನ್ನಟ್ಟಿದ್ದ ಭಜರಂಗದಳ ಕಾರ್ಯಕರ್ತರು ಕಂಕನಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಟೆಂಪೋ ತಡೆದು ಪರಿಶೀಲಿಸಿದಾಗ ಭಾರಿ ಪ್ರಮಾಣದಲ್ಲಿ ಗೋ ಮಾಂಸ ಪತ್ತೆಯಾಗಿದೆ. ಟೆಂಪೋ ಸಹಿತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹುಬ್ಬಳ್ಳಿಯಿಂದ ಗೋ ಮಾಂಸ ತರುತ್ತಿರುವುದಾಗಿ ಆರೋಪಿಗಳು ಹೇಳಿದ್ದಾರೆ. ನಾಲ್ಕು ದಿನಗಳ ಹಿಂದೆಯಷ್ಟೇ ಭಜರಂಗ ದಳ ಕಾರ್ಯಕರ್ತರ ಕಾರ್ಯಾಚರಣೆ ಸಂದರ್ಭ ಹಾಲಿನ ಟೆಂಪೋದಲ್ಲಿ ಗೋ ಮಾಂಸ ಪತ್ತೆಯಾಗಿತ್ತು.

Edited By : Manjunath H D
Kshetra Samachara

Kshetra Samachara

18/10/2020 10:24 am

Cinque Terre

37.34 K

Cinque Terre

6

ಸಂಬಂಧಿತ ಸುದ್ದಿ