ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉಡುಪಿ ಪೊಲೀಸರ ಭರ್ಜರಿ ಬೇಟೆ: 73 ಲಕ್ಷ ಮೌಲ್ಯದ ಮಾದಕ ವಸ್ತು ವಶ; ನಾಲ್ವರು ಡ್ರಗ್ ಪೆಡ್ಲರ್ ಗಳ ಸೆರೆ

ಉಡುಪಿ: ಕಳೆದ ಎರಡು ವಾರಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಉಡುಪಿ ಪೊಲೀಸರು 73.39 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.ಇಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ವಿಷ್ಣುವರ್ಧನ್, ಡಾರ್ಕ್ ನೆಟ್ ಮೂಲಕ ವ್ಯವಹರಿಸುತ್ತಿದ್ದ ಅಂತಾರಾಷ್ಟ್ರೀಯ ಜಾಲ ಪತ್ತೆ ಮಾಡಿದ್ದೇವೆ. ಈ ಸಂಬಂಧ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಮಣಿಪಾಲ ವಿದ್ಯಾರ್ಥಿಗಳಿಗೆ ಸೇಲ್ ಮಾಡಲು ತರಿಸಿದ್ದ ನಿಷೇಧಿತ ಡ್ರಗ್ ಗಳನ್ನು ವಶಪಡಿಸಿದ್ದೇವೆ.540 ಗ್ರಾಂ ತೂಕದ ಎಂಡಿಎಂಎ ಮಾತ್ರೆಗಳ ಮೌಲ್ಯ 30.57 ಲಕ್ಷ ರೂ., ಒಂದು ಸಾವಿರ ಎಲ್ ಎಸ್ ಡಿ ಸ್ಟಾಂಪ್ಸ್ ವಶ, ಇದರ ಮೌಲ್ಯ- 30 ಲಕ್ಷ ರೂ., ಮೂರು ಲಕ್ಷ ಮೌಲ್ಯದ 30 ಗ್ರಾಂ ಬ್ರೌನ್ ಶುಗರ್,131 ಗ್ರಾಂ ಹೈಡ್ರೋ ವೀಡ್ ನ ಮೌಲ್ಯ 9.82 ಲಕ್ಷ ರೂ. ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರೀ ಪ್ರಮಾಣದ ಸಿಂಥೆಟಿಕ್ ಡ್ರಗ್ ವಶಪಡಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲೂ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎಸ್ಪಿ ವಿಷ್ಣು ವರ್ಧನ್ ಮಾಹಿತಿ ನೀಡಿದರು.

Edited By : Manjunath H D
Kshetra Samachara

Kshetra Samachara

17/10/2020 07:19 pm

Cinque Terre

30.55 K

Cinque Terre

7

ಸಂಬಂಧಿತ ಸುದ್ದಿ