ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೌದಿ ಅರೇಬಿಯಾಗೆ ಹೋಗುವುದಾಗಿ ಹೇಳಿ ಹೋದ ವ್ಯಕ್ತಿ ನಾಪತ್ತೆ

ಕುಂದಾಪುರ: ಸೌದಿ ಅರೇಬಿಯಾಕ್ಕೆ ಹೋಗುವುದಾಗಿ ಹೇಳಿ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.ಈ ಘಟನೆ ಕುಂದಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕೋಟತಟ್ಟು ನಿವಾಸಿ ಮೊಹಮ್ಮದ್ ಜಲೀಲ್(36) ನಾಪತ್ತೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು, ಕಳೆದ ತಿಂಗಳು ಊರಿಗೆ ಬಂದಿದ್ದರು.ರಜೆ ಮುಗಿದ ಬಳಿಕ ಸೌದಿ ಅರೇಬಿಯಾಕ್ಕೆ ಹೋಗುವುದಾಗಿ ಹೇಳಿ ಹೋದ ಜಲೀಲ್‌ರನ್ನು ಅವರ ಮಗ ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ಆದರೆ ಜಲೀಲ್ ಸೌದಿ ಅರೇಬಿಯಾಕ್ಕೂ ಹೋಗದೇ ವಾಪಸ್‌ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

24/11/2021 03:10 pm

Cinque Terre

11.79 K

Cinque Terre

0

ಸಂಬಂಧಿತ ಸುದ್ದಿ