ಪಡುಬಿದ್ರಿ: ಇಲ್ಲಿನ ವಾರದ ಸಂತೆಯಲ್ಲಿ ಪೋಷಕರೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದ ನಾಲ್ವರು ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ,ನಾಗರಿಕ ಸೇವಾ ಟ್ರಸ್ಟ್ ಇಲಾಖೆ ಅಧಿಕಾರಿಗಳು ಮಂಗಳವಾರ ದಿಢೀರ್ ದಾಳಿ ನಡೆಸಿ ಮಕ್ಕಳ ರಕ್ಷಣೆ ಮಾಡಿದರು.
ಈ ಸಂದರ್ಭ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾನೂನಿನ ವಿರುದ್ಧವಾಗಿ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿದ್ದ ಸಂತೆ ವ್ಯಾಪಾರಸ್ಥರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು. ಮಕ್ಕಳ ರಕ್ಷಣೆ ಮಾಡಿ ಉಡುಪಿಯ ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು.
ದಾಳಿ ನಡೆಸಿದ ಸಂದರ್ಭ ಅಧಿಕಾರಿಗಳಾದ ಸದಾನಂದ ನಾಯ್ಕ್,ಪ್ರಭಾಕರ್, ಪ್ರವೀಣ್ ಕುಮಾರ್,ಪೂರ್ಣಿಮ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಇದ್ದರು.
Kshetra Samachara
08/12/2020 03:44 pm